ಸ್ಮಾರ್ಟ್ಫೋನ್ ಗ್ರಾಹಕರೇ ಎಚ್ಚರ. “ಡಾಮ್” ಎಂಬ ಆಂಡ್ರಾಯ್ಡ್ ವೈರಸ್ ಅತಿ ವೇಗದಲ್ಲಿ ಹರಡುತ್ತಿರುವುದು ವರದಿಯಾಗಿದೆ. ಇದು ಸೂಕ್ಷ್ಮ ಡೇಟಾವನ್ನು ಕದಿಯಲು, ಆಂಟಿವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ ಎಚ್ಚರಿಕೆ ನೀಡಿದೆ.
ಯಾವುದಾದರೂ ಅನಧಿಕೃತ ವೆಬ್‌ಸೈಟ್‌ಗಳು ಅಥವಾ ವಿಶ್ವಾಸಾರ್ಹವಲ್ಲದ/ಅಜ್ಞಾತ ಮೂಲಗಳಿಂದ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ಗಳ ಮೂಲಕ ಆಂಡ್ರಾಯ್ಡ್ ಫೋನ್ಗಳಿಗೆ ಈ ವೈರಸ್ ಹರಡುತ್ತಿದೆ. ಸೈಬರ್ ದಾಳಿ ಎದುರಿಸಲು ಮತ್ತು ಫಿಶಿಂಗ್, ಹ್ಯಾಕಿಂಗ್ ಆಕ್ರಮಣಗಳಿಗೆ ಈ ವೈರಸ್ ಸಹಕಾರಿಯಾಗಲಿದೆ.
ಕರೆ ರೆಕಾರ್ಡಿಂಗ್, ಸಂಪರ್ಕಗಳನ್ನು ಹ್ಯಾಕ್ ಮಾಡುವುದು, ಕ್ಯಾಮೆರಾಗೆ ಪ್ರವೇಶವನ್ನು ಪಡೆಯುವುದು, ಸಾಧನವನ್ನು ಮಾರ್ಪಡಿಸುವ ಸಾಮರ್ಥ್ಯವನ್ನು ಈ ವೈರಸ್ ಹೊಂದಿದೆ. ಪಾಸ್‌ವರ್ಡ್‌ಗಳು, ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯುವುದು, SMS ಕದಿಯುವುದು, ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು/ಅಪ್‌ಲೋಡ್ ಮಾಡುವುದನ್ನು ಕೂಡ ಈ ವೈರಸ್ ಮಾಡಲಿದೆ ಎನ್ನಲಾಗಿದೆ. ಆದ್ದರಿಂದ ಯಾವುದಾದರೂ ಫೈಲ್, ವೆಬ್ಸೈಟ್ಗಳಿಂದ ಡೌನ್‌ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ.