alex Certify BIG NEWS: ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ನಿಶ್ಚಿತಾರ್ಥ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ನಿಶ್ಚಿತಾರ್ಥ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಹೆಗ್ಡೆ ಪುತ್ರ ಅಮಾರ್ತ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಅವರ ನಿಶ್ಚಿತಾರ್ಥ ಇಂದು ನೆರವೇರಲಿದೆ.

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಕಳೆದ ಜೂನ್ 12 ರಂದು ಮದುವೆ ಮಾತುಕತೆ ನಡೆದಿತ್ತು. 2021 ರ ಫೆಬ್ರವರಿಯಲ್ಲಿ ಅಮಾರ್ತ್ಯ ಹೆಗ್ಡೆ ಮತ್ತು ಐಶ್ವರ್ಯಾ ಅವರ ಮದುವೆ ನೆರವೇರಲಿದೆ.

ಐಶ್ವರ್ಯಾ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದು, ಅಮಾರ್ತ್ಯ ಹೆಗ್ಡೆ ಕಾಫಿಡೇ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...