ಭಾರತದ ಪ್ರಸಿದ್ಧ ಅಗರಬತ್ತಿ ಕಂಪನಿ ಸೈಕಲ್ ಪ್ಯೂರ್ ಈ ಬಾರಿಯ ಓಣಂ ಹಬ್ಬದ ನಿಮಿತ್ತ ಜನತೆಗೆ ಸ್ಪರ್ಧೆಯೊಂದನ್ನು ಆಯೋಜಿಸಿದೆ. ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಆಚರಿಸಿ ಎಂದಿರುವ ಈ ಕಂಪನಿಯು ಪೂಕಾಲಂ ಸ್ಪರ್ಧೆಯನ್ನು ಆಯೋಜಿಸಿದೆ.
ಓಣಂ ಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ಯಾರು ಬೇಕಿದ್ದರೂ ಭಾಗಿಯಾಗಬಹುದಾಗಿದೆ. ಆಗಸ್ಟ್ 12 ರಿಂದ ಆರಂಭವಾಗುವ ಸ್ಪರ್ಧೆಯು ಆಗಸ್ಟ್ 23ರವರೆಗೂ ಇರಲಿದೆ.
ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೆ. ನಿಮ್ಮ ಮನೆಯಲ್ಲಿ ಬಿಡಿಸಲಾದ ಪೂಕಾಲಂನಲ್ಲಿ ಸೈಕಲ್ ಬ್ರ್ಯಾಂಡ್ನ ಉತ್ಪನ್ನಗಳನ್ನು ಇಟ್ಟು ಅದನ್ನು hashtags #OnamWithCycle #PookalamContest #CYCLEdotIN #Prayers #PrayForIndia #PrayForKerala ಹ್ಯಾಶ್ಟ್ಯಾಗ್ಗಳ ಜೊತೆಯಲ್ಲಿ ಸೈಕಲ್ ಪ್ಯೂರ್ನ ಅಧಿಕೃತ ಫೇಸ್ಬುಕ್ ಖಾತೆಗೆ ಟ್ಯಾಗ್ ಮಾಡಬೇಕು. ಕಂಪನಿಯು ಆಗಸ್ಟ್ 25ರಂದು ಐವರು ವಿಜೇತರ ಹೆಸರನ್ನು ಘೋಷಣೆ ಮಾಡಲಿದೆ.
ಇನ್ನು ಈ ಸ್ಪರ್ಧೆಯ ವಿಚಾರವಾಗಿ ಮಾತನಾಡಿದ ಸೈಕಲ್ ಪ್ಯೂರ್ ಮ್ಯಾನೇಜಿಂಗ್ ಡೈರೆಕ್ಟರ್ ಅರ್ಜುನ್ ರಂಗ, ನಾವು ಈ ಬಾರಿಯ ಹಬ್ಬವನ್ನು ಗ್ರಾಹಕರ ಜೊತೆ ವಿಶೇಷವಾಗಿ ಆಚರಿಸಲು ಬಯಸುತ್ತೇವೆ. ಓಣಂ ಹಬ್ಬದ ಪ್ರಯುಕ್ತ ಗ್ರಾಹಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಾವು ವೇದಿಕೆಯನ್ನು ಕಲ್ಪಿಸುತ್ತಿದ್ದೇವೆ. ಪ್ರತಿಯೊಬ್ಬರು ಮನೆಯಲ್ಲಿಯೇ ಸುರಕ್ಷಿತವಾಗಿ ಹಬ್ಬವನ್ನು ಆಚರಿಸಿ ಎಂದು ಹೇಳಿದ್ದಾರೆ .