alex Certify BIG NEWS: 14 ದಿನಗಳ ನಂತರವೂ ಲಾಕ್ಡೌನ್ ಮುಂದುವರಿಕೆ ಸುಳಿವು ನೀಡಿದ ಸಚಿವ ಸುಧಾಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 14 ದಿನಗಳ ನಂತರವೂ ಲಾಕ್ಡೌನ್ ಮುಂದುವರಿಕೆ ಸುಳಿವು ನೀಡಿದ ಸಚಿವ ಸುಧಾಕರ್

ಬೀದರ್: ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. ಸೋಂಕು ಕಡಿಮೆಯಾಗದಿದ್ದರೆ ಜನತಾ ಕರ್ಫ್ಯೂ ಮುಂದುವರೆಯಲಿದೆ.

ಟಫ್ ರೂಲ್ಸ್ ವಿಸ್ತರಣೆ ಬಗ್ಗೆ ಸಚಿವ ಡಾ.ಕೆ. ಸುಧಾಕರ್ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ 14 ದಿನ ಜನತಾ ಕರ್ಫ್ಯೂ ಘೋಷಣೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಸೋಂಕು ನಿಯಂತ್ರಣಕ್ಕೆ ಬರಬೇಕು. ಒಂದು ವೇಳೆ ನಿಯಂತ್ರಣಕ್ಕೆ ಬರದಿದ್ದರೆ ಕಠಿಣಕ್ರಮ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.

ಬೀದರ್ ನಲ್ಲಿ ಮಾತನಾಡಿದ ಅವರು, ಜನತಾ ಕರ್ಫ್ಯೂ ಮುಂದುವರೆಸುವ ಸುಳಿವು ನೀಡಿದ್ದಾರೆ. ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಜನ ಮನೆಯಿಂದ ಹೊರಗೆ ಬರಬಾರದು. ಸೋಂಕಿನ ಸರಪಳಿ ಮುರಿಯಬೇಕಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...