alex Certify BIG NEWS: ಒಂದು ಲಕ್ಷ ಮುಟ್ಟಿನ ಕಪ್​ ಉಚಿತವಾಗಿ ವಿತರಿಸಲಿರುವ ಸಂಸದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದು ಲಕ್ಷ ಮುಟ್ಟಿನ ಕಪ್​ ಉಚಿತವಾಗಿ ವಿತರಿಸಲಿರುವ ಸಂಸದ

ಮುಟ್ಟಿನ ಕಪ್​ಗಳ ಬಳಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಎರ್ನಾಕುಲಂ ಸಂಸದ ಹೈಬಿ ಈಡನ್​ ಕಪ್​ ಆಫ್​ ಲೈಫ್​ ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದು 24 ಗಂಟೆಗಳ ಒಳಗೆ ತಮ್ಮ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮುಟ್ಟಿನ ಕಪ್​ಗಳನ್ನು ಉಚಿತವಾಗಿ ವಿತರಿಸುವ ಗುರಿಯನ್ನು ಹೊಂದಿದೆ.

ಜಿಲ್ಲಾಡಳಿತದ ಸಹಯೋಗದಲ್ಲಿ ಆ.30ರಂದು ಜಿಲ್ಲೆಯ 100 ಕೇಂದ್ರಗಳಲ್ಲಿ ಋತುಚಕ್ರದ ಕಪ್​ ವಿತರಿಸಲಾಗುವುದು. ಕೊಚ್ಚಿನ್​ ಮತ್ತು ಎರ್ನಾಕುಲಂ ಜಿಲ್ಲಾಡಳಿತದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುತ್ತೂಟ್​ ಬೆಂಬಲಕ್ಕೆ ನಿಂತಿದೆ. ಕಪ್​ ಆಫ್​ ಲೈಫ್​ ಲಾಂಛನವನ್ನು ಕೊಚ್ಚಿನ್​ ಇಂಡಿಯನ್​ ಮೆಡಿಕಲ್​ ಅಸೋಸಿಯೇಷನ್​ (ಐಎಂಎ)ದಲ್ಲಿ ನಟ ಜಯಸೂರ್ಯ ಬುಧವಾರ ಬಿಡುಗಡೆ ಮಾಡಿದರು.

ಕಪ್​ ಆಫ್​ ಲೈಫ್​ ಅಭಿಯಾನಕ್ಕೂ ಮುನ್ನ ವಾರ್ಡ್​ 17ರಲ್ಲಿ ಮುಟ್ಟಿನ ಕಪ್​ ವಿತರಿಸಲಾಗಿತ್ತು. ಕುಂಬಳಂಗಿಯಲ್ಲಿ 4,000 ಮಹಿಳೆಯರು ಕಪ್​ಗಳ ಪ್ರಯೋಜನ ಪಡೆದರು ಎಂದು ಸಂಸದರು ಹೇಳಿದರು. ಈ ಹಿಂದೆ, ‘ಬ್ರೇಕಿಂಗ್​ ಬ್ಯಾರಿಯರ್ಸ್​’ ಯೋಜನೆಯಡಿ, ಶಾಲೆಗಳಲ್ಲಿ ಸ್ಯಾನಿಟರಿ ನ್ಯಾಪ್​ಕಿನ್​ಗಳು ಮತ್ತು ಇನ್ಸಿನರೇಟರ್​ಗಳನ್ನು ಪರಿಚಯಿಸಲಾಗಿತ್ತು. ಆದರೆ, ಪ್ಯಾಡ್​ಗಳಿಂದ ಶೌಚಾಲಯಗಳಲ್ಲಿ ಸಮಸ್ಯೆಯಾಯಿತು. ಮುಟ್ಟಿನ ಕಪ್​ಗಳು ಪರ್ಯಾಯವಾಗಿ ಕಾಣಿಸಿದೆ.

ಸ್ಯಾನಿಟರಿ ಪ್ಯಾಡ್​ಗಳು ಮತ್ತು ಡೈಪರ್​ಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವು ದೊಡ್ಡ ಪ್ರಮಾಣದಲ್ಲಿರುತ್ತವೆ. ಅವುಗಳನ್ನು ನಿರ್ವಹಣೆ ಮಾಡುವ ಸೂಕ್ತ ವ್ಯವಸ್ಥೆ ಇಲ್ಲ. ಭಾರತದಲ್ಲಿ, ಪ್ರತಿ ವರ್ಷ ಸುಮಾರು 12 ಬಿಲಿಯನ್​ ಪ್ಯಾಡ್​ಗಳನ್ನು ವಿಲೇವಾರಿ ಮಾಡಲಾಗುತ್ತದೆ. ಮಹಿಳೆ ಪ್ರತಿ ತಿಂಗಳು ಪ್ಯಾಡ್​ಗಳಿಗೆ ಕನಿಷ್ಠ 60 ರಿಂದ 80 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಸುಮಾರು ಏಳರಿಂದ 10 ವರ್ಷಗಳವರೆಗೆ ಬಾಳಿಕೆ ಬರುವ ಕಪ್​ನ ಬೆಲೆ 100 ರಿಂದ 300 ರೂ. ಆಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...