alex Certify Shocking Video: ನಡು ರಸ್ತೆಯಲ್ಲಿ ಓಡಾಡಿದ ಬೃಹತ್​ ಮೊಸಳೆ; ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video: ನಡು ರಸ್ತೆಯಲ್ಲಿ ಓಡಾಡಿದ ಬೃಹತ್​ ಮೊಸಳೆ; ವೈರಲ್​ ಆಯ್ತು ವಿಡಿಯೋ

ಕಳೆದ ಕೆಲವು ದಿನಗಳಲ್ಲಿ ಉತ್ತರ ಭಾರತದ ಅನೇಕ ಕಡೆಗಳಲ್ಲಿ ಭಾರೀ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯು ಜನ ಜೀವನವನ್ನೇ ಸಂಪೂರ್ಣ ಅಲ್ಲೋಲ ಕಲ್ಲೋಲ ಮಾಡಿತ್ತು. ಪ್ರವಾಹದ ನಂತರದ ಪರಿಸ್ಥಿತಿಯ ಅನೇಕ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ರಾಜಸ್ಥಾನದ ಕೋಟಾದಲ್ಲಿ ಮೊಸಳೆಯೊಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಸದ್ಯ ಇಂಟರ್ನೆಟ್​ನಲ್ಲಿ ಸದ್ದು ಮಾಡ್ತಿದೆ. ಗುಜರಾತ್​​ನ ಗಿರ್​​ನ ತಲಾಲಾ ವಸತಿ ಪ್ರದೇಶದಲ್ಲಿಯೂ ಸಹ ಇದೇ ಮಾದರಿಯ ದೃಶ್ಯಾವಳಿಗಳು ಕಂಡು ಬಂದಿದೆ.

ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಂತಾ ನಂದಾ ಜುಲೈ 19ರಂದು ಟ್ವಿಟರ್​ನಲ್ಲಿ ಈ ಎರಡೂ ಪ್ರದೇಶಗಳ ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಕೋಟಾದ ತಲವಾಂಡಿ ಪ್ರದೇಶದ ವಾಣಿಜ್ಯ ಕಾಲೇಜು ಬಳಿಯಲ್ಲಿ ಮೂರವರೆ ಅಡಿ ಮೊಸಳೆಯು ಮುಖ್ಯ ರಸ್ತೆಯಲ್ಲಿ ಹಾದು ಹೋಗಿದೆ.

ಕೋಟಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೈರಾಮ್​ ಪಾಂಡೆ ಮಂಗಳವಾರ ರಾತ್ರಿ ಮೊಸಳೆ ಬಗ್ಗೆ ತಮ್ಮ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮೊಸಳೆಯು ಚರಂಡಿಯಲ್ಲಿ ಕಣ್ಮರೆಯಾಗಿದೆ. ಚಂಬಲ್​ ನದಿ ದಂಡೆ ಮೇಲಿರುವ ಈ ನಗರವು ಘಾರಿಯಲ್​ ಅಭಯಾರಣ್ಯವನ್ನು ಹೊಂದಿದೆ. ಹೀಗಾಗಿ ಮೊಸಳೆಗಳು ಆಗಾಗ ವಸತಿ ಪ್ರದೇಶಗಳಿಗೆ ಎಂಟ್ರಿ ಕೊಡುತ್ತಿರುತ್ತವೆ.

ವರದಿಗಳ ಪ್ರಕಾರ ಸಜಿದ್ರಾ ಪ್ರದೇಶದಲ್ಲಿ ಪ್ರವಾಹದಿಂದಾಗಿ ಮೊಸಳೆಯು ನಗರ ಪ್ರದೇಶಕ್ಕೆ ಬಂದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ ಎನ್ನಲಾಗಿದೆ. ಕೋಟಾ ನದಿ ದಂಡೆಯ ಮೇಲಿರುವ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶಗಳಲ್ಲಿ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ ಎಂದು ಸ್ಥಳೀಯರು ಹೇಳಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...