alex Certify Crime News: ಯುವತಿ ಮುಂದೆ ಹಸ್ತಮೈಥುನ; ಕ್ಯಾಬ್ ಚಾಲಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Crime News: ಯುವತಿ ಮುಂದೆ ಹಸ್ತಮೈಥುನ; ಕ್ಯಾಬ್ ಚಾಲಕ ಅರೆಸ್ಟ್

ಯುವತಿಗೆ ಹಸ್ತಮೈಥುನದ ವಿಡಿಯೋ ಕಳುಹಿಸಿದ ಎಂಬಿಎ ವಿದ್ಯಾರ್ಥಿ ಬಂಧನ

ಕ್ಯಾಬ್ ಚಾಲಕನೊಬ್ಬ ವಿದೇಶದಿಂದ ಆಗಮಿಸಿದ್ದ 23 ವರ್ಷದ ಯುವತಿ ಮತ್ತಾಕೆಯ ಸ್ನೇಹಿತೆ ಮುಂದೆ ಕಾರಿನಲ್ಲಿಯೇ ಹಸ್ತ ಮೈಥುನ ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ವಕೀಲೆಯೂ ಆಗಿರುವ ಈ ಯುವತಿ ಯುನೈಟೆಡ್ ಕಿಂಗ್ಡಮ್ ನಿಂದ ಸ್ನೇಹಿತೆಯೊಂದಿಗೆ ಭಾರತ ಪ್ರವಾಸಕ್ಕೆ ಬಂದಿದ್ದು, ವಿಮಾನ ನಿಲ್ದಾಣದಿಂದ ದಕ್ಷಿಣ ದೆಹಲಿಯಲ್ಲಿರುವ ಪಂಚತಾರಾ ಹೋಟೆಲ್ ಗೆ ತೆರಳಲು ಕ್ಯಾಬ್ ಬುಕ್ ಮಾಡಿದ ವೇಳೆ ಈ ಘಟನೆ ನಡೆದಿದೆ.

ಶುಕ್ರವಾರದಂದು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಟೆಲ್ ಗೆ ತೆರಳಲು ಆಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಚಾಲಕ ಹಸ್ತ ಮೈಥುನ ಮಾಡಿಕೊಂಡಿದ್ದು ಆಘಾತಗೊಂಡ ಅವರುಗಳು ಇದನ್ನು ವಿರೋಧಿಸಿದ್ದಾರೆ.

ಆದರೆ ಚಾಲಕ ಅವರಿಗೆ ಬೆದರಿಕೆ ಹಾಕಿದ್ದು, ಯಾರಿಗಾದರೂ ತಿಳಿಸಿದರೆ ಎಚ್ಚರ ಎಂದಿದ್ದಾನೆ. ಆದರೆ ದೃತಿಗೆಡದ ಯುವತಿ ಪೊಲೀಸರಿಗೆ ದೂರು ನೀಡಿದ್ದು ಈಗ ಚಾಲಕನ ಬಂಧನವಾಗಿದೆ. ಇದರ ಮಧ್ಯೆ ದೂರುದಾರೆ ವಿದೇಶಕ್ಕೆ ತೆರಳಿದ್ದು, ಚಾಲಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...