alex Certify ಕ್ರೆಡಿಟ್, ಡೆಬಿಟ್ ಕಾರ್ಡ್ ಗ್ರಾಹಕರಿಗೆ ಅಲರ್ಟ್ ! RBI ನ ಈ ಮಾರ್ಗಸೂಚಿ ಅ.1 ರ ವರೆಗೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೆಡಿಟ್, ಡೆಬಿಟ್ ಕಾರ್ಡ್ ಗ್ರಾಹಕರಿಗೆ ಅಲರ್ಟ್ ! RBI ನ ಈ ಮಾರ್ಗಸೂಚಿ ಅ.1 ರ ವರೆಗೆ ವಿಸ್ತರಣೆ

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಗ್ರಾಹಕರಿಗೊಂದು ಪ್ರಮುಖ ಅಲರ್ಟ್ ಇದ್ದು, ಆರ್‌.ಬಿ.ಐ.ನ ಪ್ರಮುಖ ಮಾರ್ಗಸೂಚಿ ಅ.1 ರವರೆಗೆ ವಿಸ್ತರಣೆಯಾಗಿದೆ.

ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌.ಬಿ.ಎಫ್‌.ಸಿ.) ಜುಲೈ 1 ರಿಂದ ‘ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್’ ವಿತರಣೆ ಮತ್ತು ನಡವಳಿಕೆ ನಿರ್ದೇಶನಗಳು, 2022’ನ್ನು ಜಾರಿಗೆ ತರಬೇಕಾಗಿತ್ತು.

ರಿಸರ್ವ್ ಬ್ಯಾಂಕ್ ಹೊರಡಿಸಿದ ಸುತ್ತೋಲೆಯ ಪ್ರಕಾರ, ನಿರ್ದೇಶನದ ಕೆಲವು ನಿಬಂಧನೆಗಳ ಅನುಷ್ಠಾನಕ್ಕಾಗಿ ಟೈಮ್‌ಲೈನ್ ಅನ್ನು ಅಕ್ಟೋಬರ್ 01 ರ ವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಸಮಯ ನೀಡಲಾದ ನಿಬಂಧನೆಗಳಲ್ಲಿ ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸುವಿಕೆಗೆ ಸಂಬಂಧಿಸಿದ್ದೂ ಸೇರಿದೆ.

ನಿರ್ದೇಶನದ ಪ್ರಕಾರ, ಕಾರ್ಡ್ ವಿತರಕರು ಕ್ರೆಡಿಟ್ ಕಾರ್ಡ್ ಸಕ್ರಿಯಗೊಳಿಸಲು ಕಾರ್ಡ್ ಹೋಲ್ಡರ್‌ನಿಂದ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಆಧಾರಿತ ಸಮ್ಮತಿ ಪಡೆಯಬೇಕು.

100 ಮೀಟರ್ ಓಡಿ ದಾಖಲೆ ನಿರ್ಮಿಸಿ ವಯಸ್ಸಿಗೇ ಸವಾಲೆಸೆದ 105 ರ ಅಜ್ಜಿ…..!

ಒಂದು ವೇಳೆ ಕಾರ್ಡ್ ಸಕ್ರಿಯಗೊಳಿಸಲು ಗ್ರಾಹಕರಿಂದ ಯಾವುದೇ ಒಪ್ಪಿಗೆ ಸ್ವೀಕರಿಸದಿದ್ದರೆ ಕಾರ್ಡ್ ವಿತರಕರು ಗ್ರಾಹಕರಿಂದ ದೃಢೀಕರಣವನ್ನು ಕೋರಿದ ದಿನಾಂಕದಿಂದ ಏಳು ಕೆಲಸದ ದಿನಗಳಲ್ಲಿ ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದೆ ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಸ್ ಮಾಡಬೇಕಾಗುತ್ತದೆ.

ಇನ್ನೊಂದು ಪ್ರಮುಖ ಅಂಶವೆಂದರೆ ಕ್ರೆಡಿಟ್ ಲಿಮಿಟ್ ವಿಷಯದಲ್ಲಿ ಕಾರ್ಡುದಾರರಿಂದ ಸ್ಪಷ್ಟವಾದ ಒಪ್ಪಿಗೆ ಪಡೆಯದೆ ಕ್ರೆಡಿಟ್ ಮಿತಿಯನ್ನು ಉಲ್ಲಂಘಿಸುವುದಿಲ್ಲ ಎಂದು ಕಾರ್ಡ್ ವಿತರಣಾ ಸಂಸ್ಥೆಗಳು ಖಚಿತತೆ ನೀಡಬೇಕಾಗುತ್ತದೆ. ಈ ಪ್ರಕರಣದಲ್ಲೂ ಇದೀಗ ಅಕ್ಟೋಬರ್ 1ರವರೆಗೆ ಕಾಲಾವಕಾಶ ನೀಡಲಾಗಿದೆ.

ಉಳಿದ ನಿಬಂಧನೆಗಳ ಅನುಷ್ಠಾನಕ್ಕಾಗಿ ಜುಲೈ 1 ರ ನಿಗದಿತ ಟೈಮ್‌ಲೈನ್ ಬದಲಾಗಿಲ್ಲ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...