alex Certify ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಆರೋಪ: ಮಾಜಿ ಕಾರ್ಪೊರೇಟರ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಆರೋಪ: ಮಾಜಿ ಕಾರ್ಪೊರೇಟರ್ ಅರೆಸ್ಟ್

ಬೆಂಗಳೂರು: ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ವಿ. ಬಾಲಕೃಷ್ಣ ಅವರನ್ನು ಬಂಧಿಸಲಾಗಿದೆ.

ಕಗ್ಗಲೀಪುರ ಠಾಣೆ ಪೊಲೀಸರು ವಿ. ಬಾಲಕೃಷ್ಣ ಅವರನ್ನು ಬಂಧಿಸಿದ್ದಾರೆ. ಎಲೆಚೇನಹಳ್ಳಿ ವಾರ್ಡ್ ನಂಬರ್ 185 ರ ಮಾಜಿ ಕಾರ್ಪೊರೇಟರ್ ಬಾಲಕೃಷ್ಣ ಮತ್ತು ಸಿಪಿಐ ವಿಜಯ್ ಕುಮಾರ್ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಸಿಪಿಐ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ತಕ್ಷಣವೇ ಕಗ್ಗಲೀಪುರ ಠಾಣೆ ಪೊಲೀಸರು ಬಾಲಕೃಷ್ಣನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಪಿಐ ವಿಜಯಕುಮಾರ್ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...