alex Certify ರಸ್ತೆ ಮಧ್ಯೆ ಏಕಾಏಕಿ ನುಗ್ಗಿದ ಹಸುವಿಗೆ ಮೋಟಾರ್‌ ಸೈಕಲ್‌ ಡಿಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆ ಏಕಾಏಕಿ ನುಗ್ಗಿದ ಹಸುವಿಗೆ ಮೋಟಾರ್‌ ಸೈಕಲ್‌ ಡಿಕ್ಕಿ

ಅಗಲವಾದ ರಸ್ತೆಯ ಒಂದು ಬದಿಯಿಂದ ಏಕಾಏಕಿಯಾಗಿ ಹಸುವೊಂದು ನುಗ್ಗಿದೆ. ಅಲ್ಲಿಯವರೆಗೂ ಸಮೀಪದ ಪಾರ್ಕಿಂಗ್‌ ಸ್ಥಳದಲ್ಲಿ ಆರಾಮಾಗಿ ಮಲಗಿದ್ದ ಹಸುವಿಗೆ ಅದೇನಾಯ್ತೊ ಸೀದಾ ರಸ್ತೆ ದಾಟುವ ಆತುರದಲ್ಲಿ ಬಂದೇಬಿಟ್ಟಿತು. ಅಷ್ಟಕ್ಕೆ ಮುಗಿದಿದ್ದರೆ ಒಳ್ಳೆಯದಿತ್ತು. ಆದರೆ, ವೇಗವಾಗಿ ಬರುತ್ತಿದ್ದ ಮೋಟಾರ್‌ಸೈಕಲ್‌ ಸವಾರನೊಬ್ಬ ಹಸುವಿಗೆ ಗುದ್ದಿಬಿಟ್ಟ!

ಮುಂದೆ ಏನಾಯ್ತು ಎಂದು ಯೋಚಿಸಲು ಕೂಡ ಬೈಕ್‌ ಸವಾರನಿಗೆ ಸಮಯ ಸಿಗಲಿಲ್ಲ. ಆತ, ತನ್ನ ಬೈಕ್‌ ಸಮೇತ ನೆಲಕ್ಕೆ ಅಪ್ಪಳಿಸಿ ಸ್ವಲ್ಪ ದೂರದವರೆಗೂ ಜಾರಿಕೊಂಡೇ ಹೋಗಿದ್ದಾನೆ.
ಬೈಕ್‌ ಸವಾರನ ರಭಸದ ಹೊಡೆತಕ್ಕೆ ಹಸು ಕೂಡ ಕಂಗಾಲಾಗಿದೆ. ಅದು ದಾಟಿ ಸಾಗಬೇಕಿದ್ದ ರಸ್ತೆ ಮತ್ತೊಂದು ಭಾಗದ ಬದಲಾಗಿ ಬೇರೆ ದಿಕ್ಕಿಗೇ ದೂಡಲ್ಪಟ್ಟಿದೆ.

OMG: ಮದುವೆ ಸಮಾರಂಭಗಳಿಗೆ ಬಾಡಿಗೆಗೆ ಸಿಕ್ತಾರೆ ಸಂಬಂಧಿಕರು..!

ರಸ್ತೆ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಈ ಅಪಘಾತದ ವಿಡಿಯೊ ಮಾಡಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಯು ತಮ್ಮ ಸ್ನೇಹಿತರ ನಿರೀಕ್ಷೆ ಮಾಡುತ್ತಿದ್ದರಂತೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಅದೃಷ್ಟವಶಾತ್‌ ಬೈಕ್‌ ಸವಾರ ಹಾಗೂ ಹಸು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾ ನಗರದಲ್ಲಿ ಅ.27ರಂದು ಈ ದುರಂತ ಸಂಭವಿಸಿದೆ ಎಂದು ಯೂಟ್ಯೂಬ್‌ನಲ್ಲಿ ಹಂಚಿಕೆಯಾಗಿರುವ ವಿಡಿಯೊ ಕೆಳಗೆ ಮಾಹಿತಿ ಲಭ್ಯವಾಗಿದೆ.

ಧಾರಾವಾಹಿಯ ಈ ದೃಶ್ಯ ನೋಡಿ ಬಿದ್ದು ಬಿದ್ದು ನಗ್ತಿದ್ದಾರೆ ಜನ….!

ವಿಡಿಯೊಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆ ಪೈಕಿ ಕೆಲವರು ಹಸುವಿಗೆ ವಿಮೆ ಇಲ್ಲವಲ್ಲ. ಬೈಕ್‌ ಸವಾರನಿಗಾದ ನಷ್ಟವನ್ನು ಭರಿಸಿಕೊಡುವವರು ಯಾರು ಮಾರಾಯ್ರೆ? ಎಂದು ಕೆಣಕಿದ್ದಾರೆ.

ಮತ್ತೆ ಕೆಲವರು, ಗೂಳಿ ಎದುರು ಹೋದರೆ ಕೊಂಬು ನಮ್ಮ ದೇಹದೊಳಕ್ಕೆ ನುಗ್ಗುತ್ತದೆ. ಹಸುವಿನ ಎದುರು ಹೋದರೆ, ನಮ್ಮ ದೇಹವೇ ಪುಡಿಯಾಗುತ್ತದೆ ಎಂದು ಸವಾರನ ಕಾಲೆಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...