alex Certify ‘ಕೋವಿಶೀಲ್ಡ್’ ಮೊದಲ ಡೋಸ್ ಪಡೆದವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕೋವಿಶೀಲ್ಡ್’ ಮೊದಲ ಡೋಸ್ ಪಡೆದವರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ನವದೆಹಲಿ: ಕೋವಿಶೀಲ್ಡ್ ಲಸಿಕೆ ಮೊದಲ ಮತ್ತು ಎರಡನೆಯ ಡೋಸ್ ಸವದಿ ವಿಸ್ತರಣೆ ವಿವಾದಕ್ಕೀಡಾಗಿದೆ. 2 ಡೋಸ್ ಗಳ ಅಂತರವನ್ನು 16 ವಾರದವರೆಗೆ ವಿಸ್ತರಿಸಿದ ಸರ್ಕಾರದ ಕ್ರಮ ವಿವಾದಕ್ಕೀಡಾಗಿದ್ದು, ಇದನ್ನು 4 -6 ವಾರಗಳಿಗೆ ಇಳಿಕೆ ಮಾಡುವ ಕುರಿತು ಚಿಂತನೆ ನಡೆದಿದೆ.

ರಾಷ್ಟ್ರೀಯ ಲಸಿಕಾ ಅಭಿಯಾನ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ.ಎನ್.ಕೆ. ಅರೋರಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೋಂಕು ಪ್ರಸರಣ, ಸೋಂಕಿತರ ಸಂಖ್ಯೆ ಮೊದಲಾದ ಅಂಶಗಳಿಗೆ ಅನುಗುಣವಾಗಿ ಲಸಿಕೆ ಅಭಿಯಾನದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಕೋವಿಶೀಲ್ಡ್ ಲಸಿಕೆಗೆ 8 -12 ವಾರ ಅವಧಿ ವಿಸ್ತರಿಸಲು ಸಲಹಾ ಸಮಿತಿ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ 12 ರಿಂದ 16 ವಾರಕ್ಕೆ ವಿಸ್ತರಣೆ ಮಾಡಿದೆ ಎಂದು ಹೇಳಲಾಗಿದೆ. ಆದರೆ ಇದನ್ನು ಅಲ್ಲಗಳೆದ ಸರ್ಕಾರ, ತಜ್ಞರ ವರದಿ ಆಧಾರದ ಮೇಲೆ ಲಸಿಕೆ ಅವಧಿ ವಿಸ್ತರಿಸಲಾಗಿದೆ. ನಿಖರ ಅಂಕಿ ಅಂಶಗಳನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

ಕೋವಿಶೀಲ್ಡ್ ಲಸಿಕೆ ಎರಡು ಡೋಸ್ ನಡುವಿನ ಅಂತರ ಮರುಪರಿಶೀಲನೆಗೆ ಸಿದ್ಧವೆಂದು ಎನ್.ಕೆ. ಆರೋರಾ ತಿಳಿಸಿದ್ದು, ವೈಜ್ಞಾನಿಕ ವರದಿ ಆಧಾರದ ಮೇಲೆಯೆ ಲಸಿಕೆ ಅವಧಿ ವಿಸ್ತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...