alex Certify ಕೊರೊನಾ ಮೂರನೇ ಅಲೆ ಕುರಿತಂತೆ ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮೂರನೇ ಅಲೆ ಕುರಿತಂತೆ ಅಧ್ಯಯನದಲ್ಲಿ ಬಯಲಾಯ್ತು ಆಘಾತಕಾರಿ ಮಾಹಿತಿ

ಈ ತಿಂಗಳಲ್ಲಿ ಭಾರತದಲ್ಲಿ ಕೋವಿಡ್​ ಪ್ರಕರಣದಲ್ಲಿ ಮತ್ತೆ ಏರಿಕೆ ಕಂಡುಬರಲಿದೆ. ಆಗಸ್ಟ್​​ನಲ್ಲಿ ಆರಂಭವಾಗಲಿರುವ ಕೊರೊನಾ ಮೂರನೇ ಅಲೆಯು ಕನಿಷ್ಟ 1 ಲಕ್ಷ ಹಾಗೂ ಗರಿಷ್ಟ 1.5 ಲಕ್ಷ ಹೊಸ ಪ್ರಕರಣಗಳನ್ನು ಈ ತಿಂಗಳಲ್ಲಿ ವರದಿ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೈದರಾಬಾದ್​ ಐಐಟಿಯ ಮಾಥುಕುಮಲ್ಲಿ ವಿದ್ಯಾಸಾಗರ ಹಾಗೂ ಮಣಿಂದ್ರ ಅಗರ್ವಾಲ್​​​ ಕೊರೊನಾ ಮೂರನೇ ಅಲೆಯ ಕುರಿತು ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದ ಪ್ರಕಾರ ಆಗಸ್ಟ್​ನಿಂದ ಆರಂಭವಾಗಲಿರುವ ಕೊರೊನಾ ಮೂರನೇ ಅಲೆಯು ಅಕ್ಟೋಬರ್​ ವೇಳೆಗೆ ಗಂಭೀರ ಸ್ವರೂಪಕ್ಕೆ ಹೋಗಲಿದೆ ಎಂದು ಹೇಳಿದ್ದಾರೆ.

ಕೊರೊನಾ ಮೂರನೇ ಅಲೆಯು 2 ಅಲೆಯಷ್ಟು ಭೀಕರವಾಗಿ ಇರೋದಿಲ್ಲ. ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ದಿನಕ್ಕೆ 4 ಲಕ್ಷಕ್ಕಿಂತ ಅಧಿಕ ಪ್ರಕರಣ ವರದಿ ಮಾಡಿತ್ತು. ಈಗ ಈ ಸಂಖ್ಯೆ ತಹಬಧಿಗೆ ಬಂದಿದೆ.

ಈ ಹಿಂದೆ ಕೊರೊನಾ ಎರಡನೆ ಅಲೆ ಆರಂಭಕ್ಕೂ ಮುನ್ನವೇ ನಿಖರ ಮಾಹಿತಿ ನೀಡಿದ್ದ ವಿದ್ಯಾಸಾಗರ್​, ಗಣಿತದ ಮಾದರಿಯ ರೀತಿಯಲ್ಲೇ ಕೊರೊನಾ ಪ್ರಕರಣಗಳು ವರದಿಯಾಗಲಿದೆ. ನಮ್ಮ ಅಧ್ಯಯನದಲ್ಲಿ ತಿಳಿದ ಅಂದಾಜಿನ ಪ್ರಕಾರ ಜೂನ್ ಅಂತ್ಯದ ವೇಳೆಗೆ ಕೊರೊನಾ ಪ್ರಕರಣಗಳು ದಿನಕ್ಕೆ 20 ಸಾವಿರ ವರದಿಯಾಗಲಿದೆ ಎಂದು ಅಂದಾಜಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...