alex Certify BIG NEWS:‌ ಮತ್ತೆ ಮರಳಿತಾ ʼಕೋವಿಡ್ʼ​ ಸೋಂಕು ? ಗ್ಯಾಟ್​ವಿಕ್​ನಲ್ಲಿ ಏಕಾಏಕಿ ವಿಮಾನಯಾನ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಮತ್ತೆ ಮರಳಿತಾ ʼಕೋವಿಡ್ʼ​ ಸೋಂಕು ? ಗ್ಯಾಟ್​ವಿಕ್​ನಲ್ಲಿ ಏಕಾಏಕಿ ವಿಮಾನಯಾನ ರದ್ದು

ಲಂಡನ್​​ ಗ್ಯಾಟ್ವಿಕ್​​ನಲ್ಲಿ ಇದುವರೆಗೆ ಮೂರನೇ ಬಾರಿಗೆ ಏರ್​ ಟ್ರಾಫಿಕ್​ ನಿಯಂತ್ರಣ ಮಾಡಲಾಗಿದ್ದು ಇದಕ್ಕೆ ಏಕಾಏಕಿ ಕೋವಿಡ್​ ಸೋಂಕು ಹೆಚ್ಚಾಗುತ್ತಿರೋದೇ ಕಾರಣ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸಿಬ್ಬಂದಿಯ ಅನಾರೋಗ್ಯದಿಂದಾಗಿ ವಿಮಾನಗಳ ಹಾರಾಟದ ದರ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.

ಎಂಟು ವಿಮಾನಗಳು ಗ್ಯಾಟ್ವಿಕ್​​ ಹಾಗೂ ಬೆಲ್​ಫಾಸ್ಟ್​ ನಡುವೆಯೇ ಲ್ಯಾಂಡ್​ ಆಗಿವೆ ಎನ್ನಲಾಗಿದೆ. ಇವುಗಳಲ್ಲಿ ಆರು ವಿಮಾನಗಳು ಉತ್ತರ ಐರ್ಲೆಂಡ್​ ರಾಜಧಾನಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಎರಡು ಬೆಲ್​ಫಾಸ್ಟ್​​ ವಿಮಾನ ನಿಲ್ದಾಣಕ್ಕೆ ಸೇರಿದ ವಿಮಾನಗಳು ಎನ್ನಲಾಗಿವೆ.

ಗ್ಯಾಟ್ವಿಕ್​​ನಿಂದ ಎಡಿನ್​ಬರ್ಗ್​ಗೆ ಸಂಜೆ 7:15ರ ವಿಮಾನದಲ್ಲಿ ಆಂಗಸ್​ನ ಕನ್ಸಲ್ಟೆಂಟ್​ ಸೈಕಿಯಾಟ್ರಿಸ್ಟ್​ ಡೇನಿಯಲ್​ ಎಂಬವರು ಟಿಕೆಟ್​​ ಬುಕ್​ ಮಾಡಿದ್ದರು ಎನ್ನಲಾಗಿದೆ. ಆದರೆ ಈ ವಿಮಾನವನ್ನು 8:40ಕ್ಕೆ ರದ್ದುಗೊಳಿಸಲಾಗಿದೆ. ಈ ಸಂಬಂಧ ಮಾತನಾಡಿದ ಡೇನಿಯಲ್​​, ಸಿಬ್ಬಂದಿ ಅನಾರೋಗ್ಯದ ಕಾರಣದಿಂದಾಗಿ ವಿಮಾನಯಾನ ರದ್ದುಗೊಂಡಿದೆ. ಮತ್ತೊಮ್ಮೆ ಈ ಸೋಂಕು ಉಲ್ಬಣಗೊಂಡಿದೆ ಎಂದರೆ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...