alex Certify ಕೋವಿಡ್ ನಿರ್ಬಂಧದ ನಡುವೆಯೂ ಡಿಜೆಗೆ ಸಾವಿರಾರು ಜನರಿಂದ ಭರ್ಜರಿ ಸ್ಟೆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ನಿರ್ಬಂಧದ ನಡುವೆಯೂ ಡಿಜೆಗೆ ಸಾವಿರಾರು ಜನರಿಂದ ಭರ್ಜರಿ ಸ್ಟೆಪ್

ರಾಜಕೀಯ ನಾಯಕ ರ‍್ಯಾಲಿಗಳು ಮತ್ತು ಕಾರ್ಯಕ್ರಮಗಳಿಗೆ ಕೋವಿಡ್ ನಿರ್ಬಂಧಗಳೆಲ್ಲಾ ಕೆಲಸ ಮಾಡೋದಿಲ್ಲ ಎಂಬ ಆಪಾದನೆ ನಿಜ ಮಾಡುವಂತೆ ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಬಿಜೆಪಿ ನಾಯಕರೊಬ್ಬರು ಆಯೋಜಿಸಿದ್ದ ಮದುವೆ ಕಾರ್ಯಕ್ರಮವೊಂದು ಜರುಗಿದೆ.

ಇಲ್ಲಿನ ಡೋಲ್ವಾನ್ ತೆಹ್ಸಿಲ್‌ನ ಬಿಜೆಪಿ ನಾಯಕಿ ಸುನಂದಾ ಕುಟುಂಬ ಆಯೋಜಿಸಿದ್ದ ಮದುವೆ ಕಾರ್ಯಕ್ರಮದಲ್ಲಿ ಡಿಜೆ ಮ್ಯೂಸಿಕ್‌ಗೆ ಸಾವಿರಾರು ಮಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯಂತೆ 150ಕ್ಕಿಂತ ಹೆಚ್ಚು ಮಂದಿ ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತಿಲ್ಲ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹರಾಜಿನಲ್ಲಿ ಲ್ಯಾಂಡ್‌ ರೋವರ್‌ ನ ವಿಂಟೇಜ್ ಕಾರು ಗೆದ್ದ ಧೋನಿ

ಕೋವಿಡ್-19 ಮೂರನೇ ಅಲೆಯಲ್ಲಿ ಗುಜರಾತ್‌ನಲ್ಲಿ 12,753 ಹೊಸ ಪ್ರಕರಣಗಳು ಸೋಮವಾರ ದಾಖಲಾಗಿದ್ದು, ಐದು ಮಂದಿ ವೈರಸ್ ಕಾರಣದಿಂದ ಮೃತಪಟ್ಟಿದ್ದಾರೆ. ಗುಜರಾತ್‌ನಲ್ಲಿ ಸದ್ಯದ ಮಟ್ಟಿಗೆ 70,000+ ಸಕ್ರಿಯ ಕೋವಿಡ್ ಪ್ರಕರಣಗಳು ಇವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...