alex Certify ಹಳ್ಳಿ – ಹಳ್ಳಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿ ಕೊರೊನಾ ಲಸಿಕೆ ನೀಡುತ್ತಿದೆ ಈ ರಾಜ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳ್ಳಿ – ಹಳ್ಳಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಿ ಕೊರೊನಾ ಲಸಿಕೆ ನೀಡುತ್ತಿದೆ ಈ ರಾಜ್ಯ….!

ವಯಸ್ಕರಿಗೆ ಕೋವಿಡ್ 19 ಲಸಿಕೆಯ ಮೊದಲ ಡೋಸ್​ನ್ನು ಸಂಪೂರ್ಣವಾಗಿ ವಿತರಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಹಿಮಾಚಲ ಪ್ರದೇಶ ಪಾತ್ರವಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ಯಾರಾದರೂ ವಯಸ್ಕರು ಲಸಿಕೆಯ ಮೊದಲ ಡೋಸ್​​ ಪಡೆಯುವದರಿಂದ ತಪ್ಪಿ ಹೋಗದಂತೆ ನಿಗಾ ವಹಿಸುತ್ತಿದೆ.

ರಸ್ತೆ ಸೌಕರ್ಯವನ್ನೂ ಹೊಂದಿರದ ಗ್ರಾಮವಾದ ಕಾಂಗ್ರಾ ಜಿಲ್ಲೆಯ ಕುಗ್ರಾಮಗಳಲ್ಲಿ ಲಸಿಕಾ ತಂಡವು ಬುಧವಾರ ಹೆಲಿಕಾಪ್ಟರ್​ನಲ್ಲಿ ತೆರಳುವ ಮೂಲಕ ಲಸಿಕಾ ಅಭಿಯಾನ ನಡೆಸಿದೆ.

ಬಾರಾ ಭಂಗಾಲ್​ ಗ್ರಾಮಕ್ಕೆ ಹೆಲಿಕಾಪ್ಟರ್​ನಲ್ಲಿ ಬಂದ ಅಧಿಕಾರಿಗಳು ಬಳಿಕ ಹಿಮಾಲಯ ಪರ್ವತಶ್ರೇಣಿಯ ಬಳಿ ಹಾರಾಟ ನಡೆಸಿದ್ದಾರೆ. ರಸ್ತೆಯ ಸಂಪರ್ಕವನ್ನೂ ಹೊಂದಿರದ ಗ್ರಾಮಗಳನ್ನು ತಲುಪುವುದು ತುಂಬಾನೇ ಕಷ್ಟ. ಹೀಗಾಗಿ ಲಸಿಕಾ ಕ್ಯಾಂಪ್​ಗಳನ್ನು ನಡೆಸಲು ಹಿಮಾಚಲ ಪ್ರದೇಶ ಸರ್ಕಾರ ನಮಗೆ ಹೆಲಿಕಾಪ್ಟರ್​ ಸೌಲಭ್ಯ ಒದಗಿಸಿದೆ ಎಂದು ಡಿಸಿ ನಿಪುಮ್​ ಜಿಂದಾಲ್​ ಹೇಳಿದ್ರು.

ಕೆಲ ಸಮಸ್ಯೆಗಳನ್ನು ಹೆಚ್ಚು ಮಾಡುತ್ತೆ ‘ಸೌತೆಕಾಯಿ’

ಬಾರಾ ಬಂಗಾಲ್​ ಗ್ರಾಮದಲ್ಲಿ ಒಟ್ಟು 700 ಮಂದಿಯಿದ್ದು ಇದರಲ್ಲಿ  100 ಮಂದಿ ವಯಸ್ಕರಿಗೆ ಈ ತಂಡವು ಲಸಿಕೆಯನ್ನು ನೀಡಿದೆ ಎಂದು ಮುಖ್ಯ ಮೆಡಿಕಲ್​ ಆಫೀಸರ್​​ ಡಾ. ಗುರುದರ್ಶನ್​ ಗುಪ್ತಾ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...