alex Certify ಕೋವಿಡ್​​ ಸೋಂಕಿಗೊಳಗಾದ ಪುರುಷರಲ್ಲಿ ಕ್ಷೀಣಿಸುತ್ತೆ ವೀರ್ಯಾಣು ಸಂಖ್ಯೆ: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​​ ಸೋಂಕಿಗೊಳಗಾದ ಪುರುಷರಲ್ಲಿ ಕ್ಷೀಣಿಸುತ್ತೆ ವೀರ್ಯಾಣು ಸಂಖ್ಯೆ: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಆಗ್ರಾದಲ್ಲಿ ಕೋವಿಡ್​ 19ನಿಂದ ಗುಣಮುಖರಾದ ಡಜನ್​ಗೂ ಅಧಿಕ ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಸಂತಾನೋತ್ಪತ್ತಿ ಮೇಲೆ ಡೆಡ್ಲಿ ವೈರಸ್​ ಗಂಭೀರ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಪ್ರತಿಷ್ಟಿತ ಐವಿಎಫ್​ ಸಂಸ್ಥೆಯೊಂದು ನಡೆಸಿದ ಅಧ್ಯಯನದಲ್ಲಿ ಸಾಮಾನ್ಯ ಪುರುಷನಿಗೆ ಹೋಲಿಸಿದ್ರೆ ಕೋವಿಡ್​ 19 ರೋಗಿಗಳಲ್ಲಿ ವೀರ್ಯಾಣು ಗುಣಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಕೊರೊನಾ ಸೋಂಕು ಕಾಣಿಸಿಕೊಂಡ 60 ದಿನಗಳ ಬಳಿಕವೂ ಪುರುಷರ ವೀರ್ಯಾಣು ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಹಿರಿಯ ವೈದ್ಯಾಧಿಕಾರಿ, ಕೊರೊನಾ ಸೋಂಕು ಲ್ಯುಟೈನೈಜಿಂಗ್ ಹಾರ್ಮೋನ್​ಗಳನ್ನ ಉತ್ತೇಜಿಸಿದೆ ಹಾಗೂ ಟೆಸ್ಟೋಸ್ಟಿರಾನ್​ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಹೇಳಿದ್ದಾರೆ.

ಈ ಅಧ್ಯಯನದಿಂದ ನಮಗೆ ಕೋವಿಡ್​ ಸೋಂಕು ಪುರುಷರ ವೀರ್ಯಾಣು ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲದು ಎಂಬ ಆಘಾತಕಾರಿ ಅಂಶ ತಿಳಿದುಬಂದಿದೆ. ಅಲ್ಲದೇ ಸಾಮಾನ್ಯ ಪುರುಷನಲ್ಲಿ ಉತ್ಪತ್ತಿಯಾಗುವ ವೀರ್ಯವು 50 ಪ್ರತಿಶತ ಕಡಿಮೆ ಆಗುತ್ತದೆ ಎಂದು ಡಾ. ಎಸ್.​ಕೆ. ಕಲ್ರಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...