ಕೋವಿಡ್-19 ಸೋಂಕಿತರಾಗಿ, ರೋಗಲಕ್ಷಣಗಳು ಲಘುವಾಗಿ ಕಂಡುಬರುವ ಮಂದಿಯಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಶಕ್ತಿಯು ಆರು ತಿಂಗಳ ಮಟ್ಟಿಗೆ ಸಕ್ರಿಯವಾಗಿದ್ದು, ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿಂದ ಕಾಪಾಡುತ್ತದೆ ಎಂದು ಅಮೆರಿಕದ ಮಿಷಿಗನ್ ಮೆಡಿಸಿನ್ ಅಧ್ಯಯನವೊಂದು ತಿಳಿಸಿದೆ.
ಪಿಸಿಆರ್ ಪರೀಕ್ಷೆಯಿಂದ ಸೋಂಕು ಇರುವುದು ಖಾತ್ರಿಯಾದ 130 ಮಂದಿಯ ಮೇಲೆ ಸಂಶೋಧಕರು ಅಧ್ಯಯನ ನಡೆಸಿದ್ದು, ಇವರ ಪೈಕಿ 90 ಪ್ರತಿಶತ ಮಂದಿಯಲ್ಲಿ ನ್ಯೂಕ್ಲಿಯೋಕ್ಯಾಪ್ಸಿಡ್ ಪ್ರತಿರೋಧಕ ಶಕ್ತಿಯಲ್ಲಿ ಏರಿಕೆ ಕಂಡುಬಂದಿದೆ ಎಂದು ’ಮೈಕ್ರೋಬಯಾಲಜಿ ಸ್ಪೆಕ್ಟ್ರಮ್’ ಹೆಸರಿನ ನಿಯತಕಾಲಿಕೆಯಲ್ಲಿ ಬಿತ್ತರಗೊಂಡ ಅಧ್ಯಯನ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅಧ್ಯಯನಕ್ಕೆ ಒಳಪಟ್ಟ ಮಂದಿಯಲ್ಲಿ ಮೂವರು ಆಸ್ಪತ್ರೆಗೆ ದಾಖಲಾಗಿದ್ದರೆ ಮಿಕ್ಕವರೆಲ್ಲಾ ಲಘು ಸೋಂಕಿನ ಅನುಭವಿಗಳಾಗಿದ್ದು, ತಲೆನೋವು, ಮೈಕೈ ಸೆಳೆತ ಹಾಗೂ ರುಚಿ ಮತ್ತು ವಾಸನೆ ಗ್ರಹಿಕಾ ಶಕ್ತಿಯನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದರು.
ಡ್ರಾಮಾ ಮಾಡಲು ಹೋಗಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ
“ಈ ಹಿಂದೆ, ಕೋವಿಡ್-19ಗೆ ತೀವ್ರವಾಗಿ ಬಾಧಿತರಾದವರಲ್ಲಿ ಮಾತ್ರವೇ ಪ್ರಬಲ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂದು ಭಾವಿಸಲಾಗಿತ್ತು. ಇದೀಗ ಅಧ್ಯಯನದಿಂದ ಮತ್ತೊಂದು ಸತ್ಯ ಬಹಿರಂಗವಾದಂತಾಗಿದೆ.
ಕೋವಿಡ್-19ನ ಲಘು ರೋಗ ಲಕ್ಷಣಗಳು ಕಂಡು ಬರುವ ಮಂದಿಯಲ್ಲೂ ಸಹ ರೋಗನಿರೋಧಕ ಶಕ್ತಿ ಪ್ರಬಲವಾಗಿ ಉತ್ಪತ್ತಿಯಾಗುತ್ತಿದೆ ಎಂದು ನಾವು ಜನರಿಗೆ ತಿಳಿಸುತ್ತಿದ್ದೇವೆ ಎಂದು ಅಧ್ಯಯನದ ಮುಂಚೂಣಿ ಲೇಖಕ ಚಾರ್ಲ್ಸ್ ಶೂಲರ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಮಾರ್ಚ್ 2020 ಹಾಗೂ ಫೆಬ್ರವರಿ 2021ರ ನಡುವಿನ ಕಾಲಘಟ್ಟದಲ್ಲಿ ಕೆಂಟುಕಿಯಲ್ಲಿ ನಡೆಸಲಾದ ಅಧ್ಯಯನವೊಂದು; ಕೋವಿಡ್ ಲಸಿಕೆ ಪಡೆದ ಮಂದಿಯಲ್ಲಿ ಲಸಿಕೆ ಪಡೆಯದ ಮಂದಿಗಿಂತ ಇನ್ನೊಂದು ಬಾರಿ ಸೋಂಕಿನಿಂದ ಪಾರಾಗುವ ಸಾಧ್ಯತೆ 2.34 ಪಟ್ಟು ಹೆಚ್ಚಿದೆ ಎಂದು ತಿಳಿಸಲಾಗಿದೆ.