alex Certify ಡ್ರಾಮಾ ಮಾಡಲು ಹೋಗಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡ್ರಾಮಾ ಮಾಡಲು ಹೋಗಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ

ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಲೈಕ್ಸ್​ಗಳನ್ನ ಪಡೆಯಬೇಕು, ಲಕ್ಷಗಟ್ಟಲೇ ಫಾಲೋವರ್ಸ್ ಗಳಿಸಬೇಕೆಂಬ ಆಸೆಗೆ ಅನೇಕರು ಇನ್ನಿಲ್ಲದ ಕಸರತ್ತನ್ನು ಮಾಡುತ್ತಾರೆ. ಇದೇ ರೀತಿ ವಿಡಿಯೋದಲ್ಲಿ ಡ್ರಾಮಾ ಮಾಡಲು ಹೋದ ಮಹಿಳೆಯೊಬ್ಬಳು ನೆಟ್ಟಿಗರ ಕೈಗೆ ಸಿಕ್ಕಿ ಬಿದ್ದಿದ್ದು ಸಖತ್​ ಟ್ರೋಲ್​ಗೆ ಒಳಗಾಗಿದ್ದಾಳೆ.

ವಿಡಿಯೋದಲ್ಲಿ ತಮ್ಮ ಮಗನಿಗೆ ಅಳುವಂತೆ ಒತ್ತಾಯ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಮಹಿಳೆ ತನ್ನ ಇನ್​ಸ್ಟಾಗ್ರಾಂ ಖಾತೆ ಹಾಗೂ ಯುಟ್ಯೂಬ್​​​ ಚಾನೆಲ್​ನ್ನು ನಿಷ್ಕ್ರಿಯಗೊಳಿಸಿದ್ದಾಳೆ.

BIG SHOCKING NEWS: ಪ್ರತಿದಿನ 80 ಕೊಲೆ, 77 ಅತ್ಯಾಚಾರ; ಎನ್‌ಸಿಆರ್‌ಬಿ ವರದಿಯಲ್ಲಿ ಬಹಿರಂಗ -2020 ರ ಮಾಹಿತಿ

ಚೆಯೆನ್ನೆ ಎಂಬಾಕೆ ಶನಿವಾರದಂದು ಶೇರ್​ ಮಾಡಿದ ವಿಡಿಯೋದಲ್ಲಿ ಆಕೆ ತನ್ನ 9 ವರ್ಷದ ಮಗಳ ಬಳಿ ಅಳುವಂತೆ ನಟಿಸು ಎಂದು ಹೇಳುತ್ತಿರೋದು ನೆಟ್ಟಿಗರಿಗೆ ಸ್ಪಷ್ಟವಾಗಿ ಕಂಡಿದೆ. ಆದರೆ ವಿಡಿಯೋ ಶೀರ್ಷಿಕೆಯಲ್ಲಿ ಮಾತ್ರ ನಾವು ನೊಂದಿದ್ದೇನೆ ಎಂದು ಬರೆಯಲಾಗಿತ್ತು.

ಆದರೆ ಆಕೆ ವಿಡಿಯೋದಲ್ಲಿ ಮುಖವನ್ನು ಕೈಯಿಂದ ಮುಚ್ಚಿಕೊಳ್ಳುವಂತೆ ಮಗನಿಗೆ ಹೇಳಿದ್ದಾಳೆ. ಮಾತ್ರವಲ್ಲದೇ ಜನರಿಗೆ ನಿನ್ನ ಬಾಯಿ ಕಾಣಲಿ ಎಂದೂ ಹೇಳೋದನ್ನು ಕೇಳಬಹುದಾಗಿದೆ.

ಈ ವಿಡಿಯೋ ವೈರಲ್​ ಆದ ಬಳಿಕ ಮಹಿಳೆಯು ಸಾಕಷ್ಟು ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಇದಾದ ಬಳಿಕ ಒರಿಜಿನಲ್​ ವಿಡಿಯೋವನ್ನು ಚೆಯೆನ್ನೆ ಡಿಲೀಟ್​ ಮಾಡಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಅನೇಕರು ಈ ವಿಡಿಯೋ ಬಳಿಸಿ ಮಹಿಳೆಯನ್ನು ಟ್ರೋಲ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...