alex Certify ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಪುತ್ರಿ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಪುತ್ರಿ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ ಶಿಕ್ಷೆ

ಮಡಿಕೇರಿ: ಬಾಲಕಿ ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ತಂದೆಗೆ ಶಿಕ್ಷೆ ನೀಡಲಾಗಿದೆ. ಕುಶಾಲನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನಂಜರಾಯಪಟ್ಟಣದಲ್ಲಿ ಜನವರಿ 6 ರಂದು ಅಪಘಾತ ಸಂಭವಿಸಿತ್ತು.

ಬಾಲಕಿ ವಾಹನ ಚಾಲನೆ ಮಾಡಿ ಅಪಘಾತ ಉಂಟಾಗಿದ್ದರಿಂದ ಆಕೆಯ ಪೋಷಕರಿಗೆ 25,000 ರೂ. ದಂಡ ಮತ್ತು ಒಂದು ದಿನದ ಸಜೆ ವಿಧಿಸಲಾಗಿದೆ. ದುಬಾರೆ ಜಂಕ್ಷನ್ ನಲ್ಲಿ ಬೈಕ್ ಮತ್ತು ಸ್ಕೂಟಿ ನಡುವೆ ಅಪಘಾತ ಉಂಟಾಗಿದ್ದ ಪ್ರಕರಣದಲ್ಲಿ ನಂಜರಾಯಪಟ್ಟಣದ ಅಂತೋಣಿಯವರ 16 ವರ್ಷದ ಪುತ್ರಿ ದ್ವಿಚಕ್ರ ವಾಹನ ಚಾಲನೆ ಮಾಡಿದ್ದರು.

ಕುಶಾಲನಗರ ಜೆ.ಎಂ.ಎಫ್.ಸಿ. ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿದ್ದು, ಬಾಲಕಿಯ ತಂದೆಗೆ 25 ಸಾವಿರ ರೂಪಾಯಿ ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ತೀರ್ಪು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...