alex Certify ‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

ಗೋವಾ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

26 ವರ್ಷದ ಸುಪ್ರಿಯ ದುಬೆ ಹಾಗೂ 27 ವರ್ಷದ ವಿಭು ಶರ್ಮಾ ಮೃತಪಟ್ಟ ಜೋಡಿಯಾಗಿದ್ದು, ಇವರುಗಳು ಪಲೋಲೆಮ್ ಬೀಚ್ ನಲ್ಲಿ ಈಜಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕಳೆದ ಕೆಲವು ದಿನಗಳಿಂದ ಈ ಜೋಡಿ ಗೋವಾ ಪ್ರವಾಸದಲ್ಲಿದ್ದು, ಈಜಲು ಹೋದಾಗ ಮೊದಲಿಗೆ ಸುಪ್ರಿಯಾ ದುಬೆ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಹೋದ ವಿಭು ಶರ್ಮಾ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರ ಮೃತದೇಹಗಳನ್ನು ಹೊರ ತೆಗೆದಿರುವ ರಕ್ಷಣಾ ಸಿಬ್ಬಂದಿ ಉತ್ತರ ಪ್ರದೇಶದಲ್ಲಿರುವ ಅವರ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...