alex Certify ವಿಚ್ಛೇದನದ ನಂತರ ಸಿಗಲಿಲ್ಲ ಮತ್ತೊಬ್ಬ ಗೆಳತಿ; ಮಾಜಿ ಪತ್ನಿ ಕ್ಷಮೆ ಯಾಚಿಸಿ ಮರು ಮದುವೆಯಾದ ಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನದ ನಂತರ ಸಿಗಲಿಲ್ಲ ಮತ್ತೊಬ್ಬ ಗೆಳತಿ; ಮಾಜಿ ಪತ್ನಿ ಕ್ಷಮೆ ಯಾಚಿಸಿ ಮರು ಮದುವೆಯಾದ ಪತಿ….!

ಆಸ್ಟ್ರೇಲಿಯಾ: ವಿಚ್ಛೇದನ ಅಂತೂ ಇದೀಗ ಸಾಮಾನ್ಯ ಎನಿಸುವಷ್ಟರ ಮಟ್ಟಿಗೆ ಎಲ್ಲೆಡೆ ನಡೆಯುತ್ತಿದೆ. ಚಿಕ್ಕಪುಟ್ಟ ಕಾರಣಕ್ಕೆ ಡಿವೋರ್ಸ್​ ಮೊರೆ ಹೋಗುವವರೇ ಇದೀಗ ಹೆಚ್ಚು.

ವಿಚ್ಛೇದನ ಪಡೆದ ಕೆಲ ಸಮಯದ ಬಳಿಕ ತಾವು ಮಾಡಿದ್ದು ತಪ್ಪು ಎಂದು ಅಂದುಕೊಳ್ಳುವವರೂ ಇದ್ದಾರೆ. ಹೀಗೆ ಕೆಲವರು ಅಂದುಕೊಂಡರೂ ಇಗೊ ಅಡ್ಡಿಬಂದು ಅದನ್ನು ಒಪ್ಪಿಕೊಳ್ಳಲು ತಯಾರು ಇರುವುದಿಲ್ಲ.

ಆದರೆ ಆಸ್ಟ್ರೇಲಿಯಾದ ಜೋಡಿಯೊಂದರ ಕಥೆ ಇದೀಗ ವೈರಲ್​ ಆಗಿದೆ. ಅದಕ್ಕೆ ಕಾರಣ, ವಿಚ್ಛೇದನ ಪಡೆದ ನಂತರ ತಾವು ಮಾಡಿದ್ದು ತಪ್ಪು ಎಂದು ತಿಳಿದು ಈ ಜೋಡಿ ಮತ್ತೊಮ್ಮೆ ಮದುವೆಯಾಗಿದೆ !

ಆಸ್ಟ್ರೇಲಿಯಾದ ದಂಪತಿ ಮರುಮದುವೆಯಾಗಿ ಸುದ್ದಿಯಾಗಿದ್ದಾರೆ. ಡೇನಿಯಲ್ ಕರ್ಟಿಸ್ ಮತ್ತು ಟಿಮ್ ಕರ್ಟಿಸ್ ಜನವರಿ 2002 ರಲ್ಲಿ ಆನ್‌ಲೈನ್ ಡೇಟಿಂಗ್ ವೇದಿಕೆಯ ಮೂಲಕ ಪರಸ್ಪರ ಭೇಟಿಯಾದರು. ಎರಡು ವರ್ಷಗಳ ನಂತರ ಇವರ ಮದುವೆಯಾಯಿತು. ಮದುವೆಯ ಮೊದಲೇ ಇಬ್ಬರು ಮಕ್ಕಳು ಹಾಗೂ ಮದುವೆ ನಂತರ ಒಬ್ಬ ಮಗ ಹುಟ್ಟಿದ.

2012 ರಲ್ಲಿ ದಂಪತಿ ನಡುವೆ ಬಿರುಕು ಉಂಟಾಗಿ ವಿಚ್ಛೇದನ ಪಡೆದರು. ನಂತರ ಡೇನಿಯಲ್​ ಬೇರೆಯವರ ಜತೆ ಡೇಟಿಂಗ್​ಗೆ ಮುಂದಾದರೂ ಯಾರೂ ಸಿಗಲಿಲ್ಲ. ನಂತರ ಪತ್ನಿಯ ಬಳಿ ಮರಳಿ ತಮ್ಮಿಂದಾದ ತಪ್ಪನ್ನು ಕ್ಷಮಿಸುವಂತೆ ಕೇಳಿದರು. ಪತ್ನಿಗೂ ಒಂಟಿಯಾಗಿ ಸಾಕಾಗಿತ್ತು. ಆದ್ದರಿಂದ ಆಕೆಯೂ ಒಪ್ಪಿಕೊಂಡಳು. ಒಟ್ಟಿನಲ್ಲಿ ಇಬ್ಬರೂ ಪುನಃ ವಿವಾಹವಾಗಿ ಇದೀಗ ಸುದ್ದಿಯಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...