alex Certify ಸಾವಿನಲ್ಲೂ ಜೊತೆಯಾದ ದಂಪತಿ: ಪತ್ನಿ ಮೃತಪಟ್ಟ ಮೂರು ಗಂಟೆಯಲ್ಲೇ ಪತಿಯೂ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಜೊತೆಯಾದ ದಂಪತಿ: ಪತ್ನಿ ಮೃತಪಟ್ಟ ಮೂರು ಗಂಟೆಯಲ್ಲೇ ಪತಿಯೂ ಸಾವು

ಕೊಪ್ಪಳ: ಜೊತೆಯಾಗಿ ಜೀವನ ನಡೆಸಿದ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಮದಲಗಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಅನಾರೋಗ್ಯದಿಂದಾಗಿ ಪತ್ನಿ ಹೊನ್ನಮ್ಮ ತಳವಾರ(56) ಮೃತಪಟ್ಟಿದ್ದಾರೆ. ಪತ್ನಿ ಮೃತಪಟ್ಟ ಮೂರು ಗಂಟೆಯಲ್ಲೇ ಪತಿ ಶಿವಪ್ಪ ತಳವಾರ(65) ಸಾವನ್ನಪ್ಪಿದ್ದಾರೆ.

ಪತ್ನಿ ನಿಧನದ ನಂತರ ಹೃದಯಾಘಾತದಿಂದ ಶಿವಪ್ಪ ತಳವಾರ ಕೊನೆಯುಸಿರೆಳೆದಿದ್ದಾರೆ. ಒಟ್ಟಿಗೆ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ದಂಪತಿ ಸಾವಿಗೆ ಕುಟುಂಬದವರು, ಬಂಧುಗಳು, ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...