alex Certify ಎಲ್ಲರೂ ನೃತ್ಯದಲ್ಲಿ ಮುಳುಗಿರುವಾಗ ಮೂವರು ಮಹಿಳೆಯರ ಗಾಸಿಪ್​: ನಗೆಗಡಲಲ್ಲಿ ತೇಲಿಸಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರೂ ನೃತ್ಯದಲ್ಲಿ ಮುಳುಗಿರುವಾಗ ಮೂವರು ಮಹಿಳೆಯರ ಗಾಸಿಪ್​: ನಗೆಗಡಲಲ್ಲಿ ತೇಲಿಸಿದೆ ವಿಡಿಯೋ

ಹೆಂಗಸರು ಒಟ್ಟಿಗೇ ಸೇರಿದಾಗ ಗಾಸಿಪ್​ ಮಾಡುವುದು ಹೊಸ ವಿಷಯವೇನಲ್ಲ. ಆದರೆ ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದ್ದು, ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ.

ಜನಪ್ರಿಯ ಲವಲವಿಕೆಯ ಹಾಡು ‘ಸಜ್ನಾ ಜಿ ವರಿ ವಾರಿ’ಯ ಟ್ಯೂನ್‌ಗಳಿಗೆ ಜನರು ಉತ್ಸಾಹದಿಂದ ಕುಣಿಯುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಇದಕ್ಕೆ ಕೆಲವರು ನೃತ್ಯ ಮಾಡುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ.

ಆದರೆ ಈ ನೃತ್ಯಕ್ಕಿಂತಲೂ ಹೆಚ್ಚು ಹೈಲೈಟ್​ ಆಗಿರುವುದು, ನೃತ್ಯ ಮಾಡುತ್ತಿರುವ ಗುಂಪಿನ ಹಿಂದೆ ಮೂವರು ಮಹಿಳೆಯರು ಗಾಸಿಪ್​ ಮಾಡುತ್ತಿರುವುದು! ನಾಟಕೀಯವಾದ ಕೈ ಸನ್ನೆಗಳೊಂದಿಗೆ ಮಹಿಳೆಯರು ಅನಿಮೇಟೆಡ್ ಸಂಭಾಷಣೆ ನಡೆಸುವುದನ್ನು ಕಾಣಬಹುದಾಗಿದ್ದು, ಈ ವಿಡಿಯೋ ಭಾರಿ ವೈರಲ್​ ಅಗಿದೆ.

ಅಕ್ಟೋಬರ್ 24 ರಂದು ದೀಪಾವಳಿಯಂದು ನವದೆಹಲಿಯಲ್ಲಿ ಇದನ್ನು ಚಿತ್ರೀಕರಿಸಲಾಗಿದೆ. ಹಿನ್ನಲೆಯಲ್ಲಿ ಮಹಿಳೆಯರ ಗಾಸಿಪ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ನೆಟಿಜನ್‌ಗಳು, ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...