alex Certify BIG NEWS: ದೇಶದ ಮೊದಲ ಸ್ಮಾಗ್ ಟವರ್‌ಗೆ ರಾಷ್ಟ್ರ ರಾಜಧಾನಿಯಲ್ಲಿ ಚಾಲನೆ, ವಿಷ ವಾಯು ಹೀರಿಕೊಂಡು ಶುದ್ಧಗಾಳಿ ನೀಡುವ ಸಾಧನದ ಪ್ರಯೋಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದ ಮೊದಲ ಸ್ಮಾಗ್ ಟವರ್‌ಗೆ ರಾಷ್ಟ್ರ ರಾಜಧಾನಿಯಲ್ಲಿ ಚಾಲನೆ, ವಿಷ ವಾಯು ಹೀರಿಕೊಂಡು ಶುದ್ಧಗಾಳಿ ನೀಡುವ ಸಾಧನದ ಪ್ರಯೋಗ

ನವದೆಹಲಿ : ಮಿತಿಮೀರಿದ ವಾಯುಮಾಲಿನ್ಯ ಸಮಸ್ಯೆಯಿಂದ ವರ್ಷವರ್ಷವೂ ವಿಷಾನಿಲ ಛೇಂಬರ್ ಆಗುತ್ತಿರುವ ದೆಹಲಿ ನಗರದಲ್ಲಿ ದೇಶದಲ್ಲಿಯೇ ಮೊದಲ ಸ್ಮಾಗ್ ಟವರ್‌ ಅನ್ನು ಸೋಮವಾರ ಉದ್ಘಾಟಿಸಲಾಗಿದೆ.

ಕನೌಟ್ ಪ್ಲೇಸ್‌ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟವರ್‌ಗೆ ಚಾಲನೆ ನೀಡಿ, ‘‘ ಟವರ್ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯಲ್ಲಿನ ಮಾಲಿನ್ಯಭರಿತ ವಾಯುಕಣಗಳನ್ನು (ಪಿಎಂ2.5) ಟವರ್ ಹಿಡಿದಿಟ್ಟುಕೊಂಡು ಶುದ್ಧಗಾಳಿಯನ್ನು ಪರಿಸರಕ್ಕೆ ನೀಡಲಿದೆ ಎಂದು ಹೇಳಿದ್ದಾರೆ.

ʼಒಂದು ಸೆಕೆಂಡ್‌ಗೆ ಸುಮಾರು ಒಂದು ಸಾವಿರ ಕ್ಯೂಬಿಕ್ ಮೀಟರ್‌ಗಳಷ್ಟು ಗಾಳಿಯ ಶುದ್ಧೀಕರಣವಾಗಲಿದೆ’ ಎಂದು ಅರವಿಂದ್‌ ಕೇಜ್ರಿವಾಲ್ ತಿಳಿಸಿದ್ದಾರೆ.

ಒಟ್ಟಾರೆ ಯೋಜನೆ ವೆಚ್ಚ ಮತ್ತು ಮುಂದಿನ ಎರಡು ವರ್ಷಗಳವರೆಗೆ ನಿರ್ವಹಣಾ ವೆಚ್ಚವು ಸುಮಾರು 20 ಕೋಟಿ ರೂ. ಆಗಲಿದೆ.

ಈ ಪ್ರಯೋಗ ಯಶಸ್ವಿಯಾದಲ್ಲಿ ದೇಶಾದ್ಯಂತ ದೊಡ್ಡ ನಗರಗಳಲ್ಲಿ ಒಂದೊಂದು ಸ್ಮಾಗ್ ಟವರ್ ನಿರ್ಮಿಸಿ, ವಾಯುಮಾಲಿನ್ಯ ಹತ್ತಿಕ್ಕುವ ಚಿಂತನೆ ಕೇಂದ್ರ ಸರಕಾರಕ್ಕೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...