alex Certify BIG NEWS: ಕೊರೊನಾ ಸೋಂಕಿತರಿಗೆ ನಿರ್ಣಾಯಕ 5 ರಿಂದ 10 ದಿನ – ಇದರ ಹಿಂದಿದೆ ಬಹುಮುಖ್ಯ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿತರಿಗೆ ನಿರ್ಣಾಯಕ 5 ರಿಂದ 10 ದಿನ – ಇದರ ಹಿಂದಿದೆ ಬಹುಮುಖ್ಯ ಕಾರಣ

ಕೊರೊನಾ ಎರಡನೆ ಅಲೆಯಿಂದಾಗಿ ಅನೇಕರು ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ. 14 ದಿನಗಳ ಐಸೋಲೇಷನ್​ ಅವಧಿ ಪ್ರತಿಯೊಬ್ಬ ಸೋಂಕಿತನ ಪಾಲಿಗೆ ನಿರ್ಣಾಯಕ ದಿನವಾಗಿದೆ. ಸೌಮ್ಯ ಲಕ್ಷಣಗಳನ್ನ ಹೊಂದಿರುವವರು ಮನೆಯಲ್ಲಿಯೇ ಸೋಂಕನ್ನ ಗುಣ ಮಾಡಿಕೊಳ್ತಾರೆ. ಅಲ್ಲದೇ ಬೆಡ್​ಗಳ ಅಭಾವ ಉಂಟಾಗ್ತಿರೋ ಈ ಸಮಯದಲ್ಲಿ ಇದೊಂದು ಒಳ್ಳೆಯ ನಿರ್ಧಾರ ಕೂಡ ಹೌದು.

ಆದರೆ ಸೌಮ್ಯ ಲಕ್ಷಣಗಳು ಇದೆ ಎಂದ ಮಾತ್ರಕ್ಕೆ ಸೋಂಕನ್ನ ಅಲಕ್ಷ್ಯ ಮಾಡುವಂತಿಲ್ಲ. ಸೋಂಕು ಆರಂಭವಾದ 5 ರಿಂದ 10 ದಿನವು ಬಹಳ ನಿರ್ಣಾಯಕವಾಗಿರಲಿದೆ. ವೈದ್ಯರು ಹೇಳುವ ಪ್ರಕಾರ ಕೆಲವರು 14 ದಿನಗಳ ಅವಧಿಯಲ್ಲಿಯೇ ತೊಂದರೆಯನ್ನ ಅನುಭವಿಸಬಹುದು. ಅಥವಾ ಕೋವಿಡ್​ ಮುಗಿದ ಬಳಿಕವೂ ಉಸಿರಾಟದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತೆ.

5 ರಿಂದ 10 ದಿನ ನಿರ್ಣಾಯಕ ಹೇಗೆ..?

ಕೊರೊನಾದಿಂದ ನೀವು ಗುಣಮುಖರಾಗುವ ಅವಧಿಯನ್ನ ಮೂರು ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. 1 ರಿಂದ 4 ದಿನ, 5 ರಿಂದ 10 ದಿನ, 11 ರಿಂದ 14 ದಿನ. ಮೊದಲ ದಿನಗಳಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಸಾಮಾನ್ಯ ಜ್ವರ ಬಂದವರ ರೀತಿಯಲ್ಲೇ ಲಕ್ಷಣಗಳು ಗೋಚರವಾಗುತ್ತದೆ.

ಆದರೆ ಎರಡನೇ ವಿಭಾಗದಲ್ಲಿ ಕೆಲವರ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಉಂಟಾಗುತ್ತದೆ. ಅನೇಕ ಸೋಂಕಿತರಿಗೆ ಇದು ನಿಜವಾದ ಸೋಂಕು ಪ್ರಾರಂಭದ ಅವಧಿಯಾಗಿದೆ. ಈ ಅವಧಿಯಲ್ಲಿ ಇದ್ದಕ್ಕಿದ್ದಂತೆಯೇ ಲಕ್ಷಣಗಳು ಗಂಭೀರ ಸ್ವರೂಪವನ್ನ ಪಡೆಯಬಹುದಾಗಿದೆ.

ಕೆಲವೊಂದು ಲಕ್ಷಣಗಳು ನಿಮಗೆ ನೀವು ಆಸ್ಪತ್ರೆಗೆ ಸೇರಬೇಕು ಎಂಬ ಸೂಚನೆಯನ್ನ ನೀಡುತ್ತದೆ. ಇದ್ದಕ್ಕಿದ್ದಂತೆ ಆಮ್ಲಜನಕ ಮಟ್ಟ ಕುಸಿತವಾಗುವುದು. ಕಡಿಮೆಯಾಗದ ಜ್ವರ, ಉಸಿರಾಟದ ತೊಂದರೆ ಈ ರೀತಿಯ ಲಕ್ಷಣಗಳನ್ನ ನೀವು ನಿರ್ಲಕ್ಷ್ಯ ಮಾಡುವಂತಿಲ್ಲ. ಕೊರೊನಾದ ಎರಡನೆ ಹಂತದಲ್ಲಿ ಆಮ್ಲಜನಕ ಮಟ್ಟ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣುತ್ತಾ ಹೋಗಬಹುದು.

5 ರಿಂದ 10ನೇ ದಿನ ಹೇಗಿರಲಿದೆ..?

ಅತಿಯಾದ ಕೊಬ್ಬಿನ ಅಂಶ, ಸ್ಥೂಲಕಾಯ, ಹೆಚ್​ಐವಿಯಂತಹ ಸೋಂಕನ್ನ ಹೊಂದಿರುವವರಿಗೆ ಎರಡನೆ ಹಂತ ಅತ್ಯಂತ ನಿರ್ಣಾಯಕವಾಗಿರಲಿದೆ. ಆರೋಗ್ಯವಂತರೂ ಸಹ ಈ ಹಂತದಲ್ಲಿ ಕೋವಿಡ್​ನ ಗಂಭೀರ ಲಕ್ಷಣಗಳಿಗೆ ತುತ್ತಾಗಲೂಬಹುದಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ವೈದ್ಯರು ನೀಡುವ ಎಲ್ಲಾ ಸಲಹೆಗಳನ್ನ ಗಂಭೀರವಾಗಿ ಸ್ವೀಕರಸಬೇಕಾಗಿದೆ.

ನಂತರದ ದಿನಗಳು ಹೇಗಿರಲಿದೆ..?

ಮನೆಯಲ್ಲಿಯೇ ಸೋಂಕನ್ನ ಗುಣಪಡಿಸಿಕೊಳ್ಳುತ್ತಿರುವವರು ಈ ದಿನಗಳಲ್ಲಿ ವೈದ್ಯರ ಸೂಕ್ತ ಸಂಪರ್ಕದಲ್ಲಿ ಇರೋದು ಒಳಿತು. ಅಲ್ಲದೇ ಈ ಹಂತದಲ್ಲಿ ನಿಮ್ಮ ದೇಹದಲ್ಲಿ ಕಂಡು ಬರುತ್ತಿರುವ ಎಲ್ಲಾ ಲಕ್ಷಣಗಳ ಬಗ್ಗೆ ನಿಮಗೆ ನಿಗಾ ಇರಬೇಕು.

ಈ ಹಂತದಲ್ಲಿ ವೈದ್ಯರು ನಿಮಗೆ ಆಮ್ಲಜನಕ ಮಟ್ಟ ಸುಧಾರಿಸುವ ಕೆಲ ಥೆರಪಿ ಹಾಗೂ ವೈರಾಣುಗಳನ್ನ ನಾಶ ಮಾಡುವ ಔಷಧಿಗಳನ್ನ ನೀಡ್ತಿರ್ತಾರೆ. ವೈದ್ಯರ ಸಲಹೆಯ ಹೊರತಾಗಿಯೂ ನೀವು ನಿಮ್ಮ ಹೊಟ್ಟೆಯನ್ನ ಅಡಿಯಾಗಿಸಿ ಮಲಗಿಕೊಂಡಲ್ಲಿ ದೇಹದಲ್ಲಿ ಆಮ್ಲಜನಕ ಮಟ್ಟ ಸರಿದೂಗಲು ನೆರವಾಗಲಿದೆ. ಇದು ಪ್ರೋನಿಂಗ್​ ವಿಧಾನವಾಗಿದೆ.

ಸುದರ್ಶನ ಕ್ರಿಯಾ ಯೋಗ (SKY) ಮಾಡೋದ್ರಿಂದ ನಿಮ್ಮ ದೇಹ, ಮನಸ್ಸು ಹಾಗೂ ಭಾವನೆಗಳು ನಿರಾಳ ಎನಿಸಲಿವೆ. ಏಮ್ಸ್​ನಲ್ಲಿ ನಡೆಸಲಾದ ಅಧ್ಯಯನದಲ್ಲೂ ಸುದರ್ಶನ ಕ್ರಿಯಾ ಯೋಗದಿಂದ ಕೋವಿಡ್​ ರೋಗಿಗಳಿಗೆ ಲಾಭವಾದ ಉದಾಹರಣೆ ಇದೆ. ಇದರಿಂದ ದೇಹದಲ್ಲಿ ಆರ್​ಎನ್​ಎ ಹಾಗೂ ಎಂಜೈಮ್​ ಚಟುವಟಿಕೆ ಸುಧಾರಿಸಲಿದೆ. ಹೀಗಾಗಿ ಕೋವಿಡ್​ ಸಂದರ್ಭದಲ್ಲಿ ಪ್ರಾಣಾಯಾಮ ಅಥವಾ ಸುದರ್ಶನ ಕ್ರಿಯಾ ಯೋಗ ಹಾಗೂ ಧ್ಯಾನಗಳನ್ನ ಮಾಡಿ. ಇದು ಆರೋಗ್ಯವನ್ನ ಸುಧಾರಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...