alex Certify ಲಸಿಕೆ ಅಭಿಯಾನದಲ್ಲಿ ದೇಶದ ಅದ್ಬುತ ಸಾಧನೆ: 1 ತಿಂಗಳಲ್ಲಿ 11ರಿಂದ ನಾಲ್ಕನೇ ಸ್ಥಾನಕ್ಕೇರಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಅಭಿಯಾನದಲ್ಲಿ ದೇಶದ ಅದ್ಬುತ ಸಾಧನೆ: 1 ತಿಂಗಳಲ್ಲಿ 11ರಿಂದ ನಾಲ್ಕನೇ ಸ್ಥಾನಕ್ಕೇರಿದ ಭಾರತ

ವಿಶ್ವದ ಅತಿದೊಡ್ಡ ಕೊರೊನಾ ಲಸಿಕೆ  ಅಭಿಯಾನವು ಭಾರತದಲ್ಲಿ ಜನವರಿ 16 ರಿಂದ ಪ್ರಾರಂಭವಾಗಿದೆ. ಈ ಅಭಿಯಾನಕ್ಕೆ ಈಗ ಒಂದು ತಿಂಗಳು ಪೂರ್ಣಗೊಂಡಿದೆ. ಫೆಬ್ರವರಿ 16 ರ ಹೊತ್ತಿಗೆ ಸರ್ಕಾರವು 88.57 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆಯ ಮೊದಲ ಡೋಸ್ ನೀಡಿದೆ. ಈ ಪೈಕಿ ಎರಡೂವರೆ ಲಕ್ಷ ಜನರಿಗೆ ಎರಡನೇ ಡೋಸ್ ಸಿಕ್ಕಿದೆ.

ಕೊರೊನಾ ಲಸಿಕೆ ಹಾಕುವ ಸ್ಪರ್ಧೆಯಲ್ಲಿ ಭಾರತ 11ನೇ ಸ್ಥಾನದಿಂದ ಈಗ ನಾಲ್ಕನೇ ಸ್ಥಾನಕ್ಕೇರಿದೆ. ಜನವರಿ 16 ರಂದು ದೇಶದಲ್ಲಿ 1.91 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಆ ಸಂದರ್ಭದಲ್ಲಿ ನಾವು 11ನೇ ಸ್ಥಾನದಲ್ಲಿದ್ದೆವು. ನಮಗಿಂತ ಮೊದಲು ಲಸಿಕೆ ಅಭಿಯಾನ ಶುರು ಮಾಡಿ ಮುಂದಿದ್ದ ಬ್ರಿಟನ್, ಜರ್ಮನಿ ಮತ್ತು ಇಟಲಿಯಂತಹ ದೇಶಗಳನ್ನು ಹಿಂದಿಕ್ಕಿ ಈಗ ನಾವು ನಾಲ್ಕನೇ ಸ್ಥಾನಕ್ಕೇರಿದ್ದೇವೆ.

ಡಿಸೆಂಬರ್ 14 ರಿಂದ ಯುಎಸ್ ನಲ್ಲಿ ಲಸಿಕೆ ಅಭಿಯಾನ ಪ್ರಾರಂಭವಾಗಿದೆ. ಲಸಿಕೆಯನ್ನು 9 ಮಿಲಿಯನ್ ಜನರಿಗೆ ಹಾಕಲು ಅಲ್ಲಿ 35 ದಿನಗಳನ್ನು ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 8 ರಿಂದ ಬ್ರಿಟನ್‌ನಲ್ಲಿ ಲಸಿಕೆ ಪ್ರಾರಂಭವಾಗಿದ್ದು ಅಲ್ಲಿ 9 ಮಿಲಿಯನ್ ಜನರಿಗೆ ಲಸಿಕೆ ನೀಡಲು 50 ದಿನ ಹಿಡಿದಿದೆ. ವೇಗವಾಗಿ ಚುಚ್ಚುಮದ್ದು ಹಾಕುವುದ್ರಲ್ಲಿ ಭಾರತ ಮುಂಚೂಣಿಯಲ್ಲಿದೆ. 30 ದಿನಗಳಲ್ಲಿ ಸುಮಾರು 9 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ.

ಇಲ್ಲಿಯವರೆಗೆ ಲಸಿಕೆಯ ದೊಡ್ಡ ಅಡ್ಡ ಪರಿಣಾಮ ಕಂಡು ಬಂದಿಲ್ಲ. ಆರೋಗ್ಯ ಸಚಿವಾಲಯದ ಪ್ರಕಾರ, ಫೆಬ್ರವರಿ 16 ರವರೆಗೆ ಲಸಿಕೆ ಹಾಕಿದ ನಂತರ ಕೇವಲ 36 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಲಸಿಕೆ ನೀಡಿದ ನಂತರ 29 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಕೊರೊನಾ ಲಸಿಕೆ ಯಾರಿಗೆ ಮೊದಲು ಸಿಗಬೇಕು ಎಂಬ ಬಗ್ಗೆ ಡಿಸೆಂಬರ್‌ನಲ್ಲಿಯೇ ಸರ್ಕಾರ ನಿರ್ಧಾರ ಕೈಗೊಂಡಿತ್ತು. 300 ಮಿಲಿಯನ್ ಜನರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು. 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಮುಂಚೂಣಿ ಕೆಲಸಗಾರರೊಂದಿಗೆ 27 ಕೋಟಿ ಜನರು, 50 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ಕೆಲವು ರೀತಿಯ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಈ ಪಟ್ಟಿಯಲ್ಲಿದ್ದಾರೆ.

ದೇಶದಲ್ಲಿ ಗರಿಷ್ಠ ಲಸಿಕೆ ಹಾಕುವ ವಿಷಯದಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 9.34 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಈ ಪೈಕಿ 18 ಸಾವಿರಕ್ಕೂ ಹೆಚ್ಚು ಜನರು ಎರಡನೇ ಡೋಸ್ ಪಡೆದಿದ್ದಾರೆ. 7.26 ಲಕ್ಷ ಜನರಿಗೆ ಲಸಿಕೆ ಹಾಕಿದ ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

ಆಗಸ್ಟ್ 2021 ರ ಹೊತ್ತಿಗೆ 300 ಮಿಲಿಯನ್ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.  ಈ ವರ್ಷ ಕೊರೊನಾ ಲಸಿಕೆಗಾಗಿ 35 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಮಾರುಕಟ್ಟೆಯಾಗಿದೆ. ವಿದೇಶಾಂಗ ಸಚಿವಾಲಯದ ಪ್ರಕಾರ, ಕೊರೊನಾದ 2.29 ಕೋಟಿ ಲಸಿಕೆ ಪ್ರಮಾಣವನ್ನು ಈವರೆಗೆ 20 ದೇಶಗಳಿಗೆ ನೀಡಲಾಗಿದೆ. ಫೆಬ್ರವರಿ 16 ರ ಹೊತ್ತಿಗೆ ಭಾರತವು ಬಾಂಗ್ಲಾದೇಶಕ್ಕೆ ಅತಿ ಹೆಚ್ಚು 7 ಮಿಲಿಯನ್ ಡೋಸ್‌ಗಳನ್ನು ನೀಡಿದೆ. ಅದರ ನಂತರ ಮ್ಯಾನ್ಮಾರ್‌ಗೆ 37 ಲಕ್ಷ ಡೋಸೇಜ್ ಮತ್ತು ನೇಪಾಳಕ್ಕೆ 10 ಲಕ್ಷ ಡೋಸ್ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...