alex Certify BIG NEWS: ಕೊರೊನಾ ಸೋಂಕಿನಿಂದಾಗಿ ಒಲಿಂಪಿಕ್​ನಿಂದ ಹೊರನಡೆದ ಅಮೆರಿಕದ ವಿಶ್ವ ಶ್ರೇಯಾಂಕಿತ ಆಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ಸೋಂಕಿನಿಂದಾಗಿ ಒಲಿಂಪಿಕ್​ನಿಂದ ಹೊರನಡೆದ ಅಮೆರಿಕದ ವಿಶ್ವ ಶ್ರೇಯಾಂಕಿತ ಆಟಗಾರ

ಅಮೆರಿಕದ ಪೋಲ್​ ವಾಲ್ಟ್​ ಆಟಗಾರ ಸ್ಯಾಮ್​ ಕೆಂಡ್ರಿಕ್ಸ್​ ಕೋವಿಡ್​ ಸೋಂಕಿಗೆ ಒಳಗಾಗಿದ್ದು ಟೋಕಿಯೋ ಒಲಿಂಪಿಕ್​ನಿಂದ ಹೊರನಡೆದಿದ್ದಾರೆ. ವಿಶ್ವ ಶ್ರೇಯಾಂಕಿತರಾಗಿದ್ದ ಸ್ಯಾಮ್​ರನ್ನ ಪದಕ ಗೆಲ್ಲುವ ಸ್ಪರ್ಧಿ ಎಂದೇ ಪರಿಗಣಿಸಲಾಗಿತ್ತು.

ಅಮೆರಿಕ ಒಲಿಂಪಿಕ್​​​ ಆಡಳಿತ ಮಂಡಳಿಯು ನೀಡಿರುವ ಮಾಹಿತಿಯ ಪ್ರಕಾರ ಕೋವಿಡ್​ 19 ಸೋಂಕಿಗೆ ಒಳಗಾಗಿರುವ ಪೋಲ್​ ವಾಲ್ಟರ್​ ಸ್ಯಾಮ್​ ಕೆಂಡ್ರಿಕ್ಸ್​ ಟೋಕಿಯೋ ಒಲಿಂಪಿಕ್ಸ್​ನಿಂದ ಹೊರನಡೆದಿದ್ದಾರೆ. ಸ್ಯಾಮ್​​ರನ್ನ ಹೋಟೆಲ್​ಗೆ ಶಿಫ್ಟ್​ ಮಾಡಲಾಗಿದ್ದು ಐಸೋಲೇಷನ್​​ನಲ್ಲಿ ಇಡಲಾಗಿದೆ ಎಂದು ಸ್ಯಾಮ್ ತಂದೆ ಹಾಗೂ ಕೋಚ್​ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

250 ರೂ.ಗಿಂತ ಕಡಿಮೆ ಬೆಲೆಗೆ ಈ ಟೆಲಿಕಾಂ ಕಂಪನಿಗಳು ನೀಡ್ತಿವೆ ಭರ್ಜರಿ ಡೇಟಾ

ಕೊನೆಯ ಎರಡು ವರ್ಲ್ಡ್​ ಚಾಂಪಿಯನ್​ಶಿಪ್​​​ನಲ್ಲಿ ಸ್ಯಾಮ್​​ ವಿಜೇತರಾಗಿದ್ದರು. 2016ರಲ್ಲಿ ಬ್ರೆಜಿಲ್​ನ ರಿಯೋ ಡಿ ಜನೈರೋದಲ್ಲಿ ನಡೆದಿದ್ದ ಬೇಸಿಗೆ ಒಲಿಂಪಿಕ್​ನಲ್ಲಿ ಸ್ಯಾಮ್​ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು.

ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಟೋಕಿಯೋ ಒಲಿಂಪಿಕ್​ನಲ್ಲಿ ಕನಿಷ್ಟ ಮೂವರು ಹೊಸ ಆಟಗಾರರಲ್ಲಿ ಕೊರೊನಾ ಸೋಂಕು ವರದಿಯಾಗಿದ್ದು ಈ ಮೂಲಕ ಜುಲೈ 1ರಿಂದ ಒಟ್ಟು ಸೋಂಕಿತ ಆಟಗಾರರ ಸಂಖ್ಯೆ 20 ಆಗಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...