alex Certify BIG NEWS: 4 ಜಿಲ್ಲೆಗಳಲ್ಲಿ ಶೂನ್ಯ, 6 ಜಿಲ್ಲೆಗಳಲ್ಲಿ ಅಧಿಕ; ಇಲ್ಲಿದೆ ಜಿಲ್ಲಾವಾರು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 4 ಜಿಲ್ಲೆಗಳಲ್ಲಿ ಶೂನ್ಯ, 6 ಜಿಲ್ಲೆಗಳಲ್ಲಿ ಅಧಿಕ; ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಸೋಂಕು ಕೊಂಚ ಇಳಿಕೆಯಾಗಿದ್ದು, 1159 ಜನರಿಗೆ ಸೋಂಕು ತಗುಲಿದೆ. 1112 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 21 ಸೋಂಕಿತರು ಸಾವನ್ನಪ್ಪಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 29,50,604 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೆ 28,94,827 ಜನ ಗುಣಮುಖರಾಗಿದ್ದು, 37,339 ಜನ ಮೃತಪಟ್ಟಿದ್ದಾರೆ.

ಪಾಸಿಟಿವಿಟಿ ಶೇಕಡ 0.66 ರಷ್ಟು ಇದೆ. 18,412 ಸಕ್ರಿಯ ಪ್ರಕರಣಗಳಿದ್ದು, ಇವತ್ತು ಒಂದೇ ದಿನ 1,75,319 ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿಂದು 359 ಜನರಿಗೆ ಸೋಂಕು ತಗುಲಿದ್ದು, 232 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7 ಜನರು ಮೃತಪಟ್ಟಿದ್ದಾರೆ. 7558 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿತರ ಮಾಹಿತಿ

ಬಾಗಲಕೋಟೆ 2, ಬಳ್ಳಾರಿ 6, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 9, ಬೀದರ್ 0, ಚಾಮರಾಜನಗರ 9, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 7, ದಾವಣಗೆರೆ 8, ದಾರವಾಡ 8, ಗದಗ 4, ಹಾವೇರಿ 0, ಕಲಬುರಗಿ 5, ಕೊಪ್ಪಳ 3, ರಾಯಚೂರು 0, ರಾಮನಗರ 1, ವಿಜಯಪುರ 4, ಯಾದಗಿರಿ 0 ಪ್ರಕರಣ ವರದಿಯಾಗಿದೆ.

ಬೆಂಗಳೂರು ನಗರ 359, ಚಿಕ್ಕಮಗಳೂರು 48, ದಕ್ಷಿಣಕನ್ನಡ 191, ಹಾಸನ 81, ಕೊಡಗು 95, ಮೈಸೂರು 91, ಉಡುಪಿ 91 ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ಸಂಖ್ಯೆ

ಬೆಂಗಳೂರು ನಗರ 7, ಚಾಮರಾಜನಗರ 1, ಚಿಕ್ಕಮಗಳೂರು 1, ದಕ್ಷಿಣಕನ್ನಡ 5, ದಾವಣಗೆರೆ 1, ಹಾಸನ 2, ತುಮಕೂರು 1, ಉಡುಪಿ 3 ಸೇರಿ ರಾಜ್ಯದಲ್ಲಿ 21 ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...