alex Certify ಮೈಸೂರು, ತುಮಕೂರು, ಹಾಸನ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಬಿಗ್ ಬ್ಲಾಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈಸೂರು, ತುಮಕೂರು, ಹಾಸನ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಬಿಗ್ ಬ್ಲಾಸ್ಟ್

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 41,457 ಜನರಿಗೆ ಕೊರೊನಾ ಸೋಂಕು ತಗುಲಿದೆ. 20 ಜನರು ಮೃತಪಟ್ಟಿದ್ದಾರೆ. 8353 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 32,88,700 ಏರಿಕೆಯಾಗಿದ್ದು, ಇದುವರೆಗೆ 38,465 ಜನ ಸೋಂಕಿತರು ಮೃತಪಟ್ಟಿದ್ದಾರೆ. 29,99,825 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 2,50,381 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 22.30 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 25,595 ಜನರಿಗೆ ಕೊರೊನಾ ಸೋಂಕು ತಗುಲಿದೆ. 7 ಜನ ಸೋಂಕಿತರು ಮೃತಪಟ್ಟಿದ್ದಾರೆ. 4514 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,78,328 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲೆಗಳ ವಿವರ:

ಬಳ್ಳಾರಿ 714, ದಕ್ಷಿಣಕನ್ನಡ 1058, ಧಾರವಾಡ 726, ಹಾಸನ 1739, ಮಂಡ್ಯ 895, ಮೈಸೂರು 1848, ತುಮಕೂರು 1731, ಉಡುಪಿ 801 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದೆ.

ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 7, ಚಾಮರಾಜನಗರ 1, ಚಿತ್ರದುರ್ಗ 1, ದಾವಣಗೆರೆ 1, ಧಾರವಾಡ 1, ಹಾಸನ 1, ಮೈಸೂರು 3, ರಾಮನಗರ 1, ತುಮಕೂರು 2, ಉತ್ತರಕನ್ನಡ 1 ಸೇರಿ ರಾಜ್ಯದಲ್ಲಿ 20 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...