alex Certify ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ದಾಳಿ: ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ದಾಳಿ: ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 48,049 ಜನರಿಗೆ ಕೊರೋನಾ ಸೋಂಕು ತಗುಲಿದೆ. 22 ಜನ ಸೋಂಕಿತರು ಮೃತಪಟ್ಟಿದ್ದಾರೆ. 18,115 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ 3,23,143 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 19.23 ರಷ್ಟು ಇದೆ.

ಇದುವರೆಗೆ 38,537 ಸೋಂಕಿತರು ಮೃತಪಟ್ಟಿದ್ದಾರೆ. 30,63,292 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 34,25,002 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು ಹೊಸದಾಗಿ 29,068 ಜನರಿಗೆ ಸೋಂಕು ತಗುಲಿದ್ದು, 6 ಮಂದಿ ಮೃತಪಟ್ಟಿದ್ದಾರೆ. 7196 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 2,23,580 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಳ್ಳಾರಿ 717, ಬೆಂಗಳೂರು ಗ್ರಾಮಾಂತರ 1036, ಚಿಕ್ಕಬಳ್ಳಾಪುರ 772, ದಕ್ಷಿಣಕನ್ನಡ 897, ಹಾಸನ 1889, ಕಲಬುರ್ಗಿ 1164, ಮಂಡ್ಯ 1506, ಮೈಸೂರು 915, ತುಮಕೂರು 2021, ಉಡುಪಿ 1018 ಹೊಸ ಪ್ರಕರಣ ವರದಿಯಾಗಿವೆ.

ಮೃತಪಟ್ಟವರ ವಿವರ:

ಬೆಳಗಾವಿ 1, ಬೆಂಗಳೂರು ನಗರ 6, ದಕ್ಷಿಣಕನ್ನಡ 1, ಧಾರವಾಡ 1, ಹಾಸನ 1, ಹಾವೇರಿ 2, ಮೈಸೂರು 3, ರಾಮನಗರ 1, ಶಿವಮೊಗ್ಗ 1, ಉಡುಪಿ 4, ಉತ್ತರಕನ್ನಡ 1 ಸೇರಿ ರಾಜ್ಯದಲ್ಲಿ 22 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...