alex Certify ಕೊರೊನಾ ಲಸಿಕೆ ನಂತ್ರ ಬೇರೆ ಬೇರೆ ವಯಸ್ಸಿನವರನ್ನು ಕಾಡ್ತಿದೆ ವಿವಿಧ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ನಂತ್ರ ಬೇರೆ ಬೇರೆ ವಯಸ್ಸಿನವರನ್ನು ಕಾಡ್ತಿದೆ ವಿವಿಧ ಸಮಸ್ಯೆ

ಕೊರೊನಾ ರೋಗವನ್ನು ತಡೆಗಟ್ಟಲು ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಪ್ರತಿ ಹಳ್ಳಿಹಳ್ಳಿಯಲ್ಲಿ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ಅನೇಕರ ಮೇಲೆ ಅಡ್ಡಪರಿಣಾಮ ಬೀರುತ್ತಿದೆ. ಲಸಿಕೆ ಹಾಕಿದ ನಂತ್ರ ಬೀರುವ ಅಡ್ಡಪರಿಣಾಮಕ್ಕೆ ಹೆದರಿ ಯಾವುದೇ ಕಾರಣಕ್ಕೂ ಲಸಿಕೆ ಹಾಕಿಸಿಕೊಳ್ಳದೆ ಇರಬೇಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ವಯಸ್ಸು, ಆರೋಗ್ಯ ಸ್ಥಿತಿ ಮೇಲೆ ಅಡ್ಡಪರಿಣಾಮ ಕಾಣಿಸುತ್ತದೆ.

ಕೊರೊನಾ ಲಸಿಕೆ ಹಾಕಿದ ನಂತ್ರ ಕಾಣಿಸಿಕೊಳ್ಳುವ ಅಡ್ಡಪರಿಣಾಮ ವಯಸ್ಸು, ವ್ಯಕ್ತಿಯ ಲೈಂಗಿಕತೆ ಮತ್ತು ವಿಭಿನ್ನ ಲಸಿಕೆಯನ್ನು ಅವಲಂಭಿಸಿದೆ. ಲಸಿಕೆ ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ.

ಲಸಿಕೆ ನಂತರ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುವುದರಿಂದ, ವಯಸ್ಸಾದವರಲ್ಲಿ ಕಡಿಮೆ ಅಡ್ಡಪರಿಣಾಮಗಳು ಕಂಡುಬರುತ್ತವೆ. ಲಸಿಕೆ ನಂತರ ಯುವಕರಲ್ಲಿ ಅಡ್ಡ ಪರಿಣಾಮ ಸ್ವಲ್ಪ ಹೆಚ್ಚು ಗೋಚರಿಸುತ್ತದೆ. 65 ವರ್ಷ ಮೇಲ್ಪಟ್ಟವರಲ್ಲಿ ಅಡ್ಡಪರಿಣಾಮ ಕಡಿಮೆ ಇರುತ್ತದೆ. ವಯಸ್ಸಾದವರಲ್ಲಿ ದಣಿದ, ನೋವು, ಜ್ವರ ಸಮಸ್ಯೆ ಬಹಳ ವಿರಳವಾಗಿ ಕಂಡುಬಂದಿದೆ. ಫಿಜರ್ ಮತ್ತು ಮಾಡರ್ನಾದ ಕೊರೊನಾ ಲಸಿಕೆ  ತೆಗೆದುಕೊಂಡವರಲ್ಲಿ ಅಡ್ಡಪರಿಣಾಮ ಕಡಿಮೆಯಿದೆ.

ಚಿಕ್ಕ ವಯಸ್ಸಿನವರಿಗೆ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಲಸಿಕೆ ನಂತ್ರ ಅವರ ಮೇಲೆ ಹೆಚ್ಚಿನ ಅಡ್ಡಪರಿಣಾಮ ಬೀರುತ್ತಿದೆ. ಲಸಿಕೆಯ ನಂತರ ಪ್ರತಿರಕ್ಷಣಾ ವ್ಯವಸ್ಥೆಯು ದೇಹದಲ್ಲಿ ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ ಕೆಲವು ಅಡ್ಡಪರಿಣಾಮಗಳು ಕಂಡುಬರುತ್ತವೆ. ಆಯಾಸ, ನೆಗಡಿ, ಕೀಲು ನೋವು ಮತ್ತು ಬೆನ್ನು ನೋವು ಸೇರಿವೆ.

ಲಸಿಕೆ ನಂತ್ರ ಮಹಿಳೆಯರಲ್ಲಿ  ಕೆಲವು ಅಸಾಮಾನ್ಯ ಲಕ್ಷಣ ಕಾಣಿಸುತ್ತದೆ. ಹೆದರಿಕೆ, ಹೊಟ್ಟೆ ನೋವು, ಸೆಳೆತ ಮತ್ತು ಮುಟ್ಟಿನ ತಾತ್ಕಾಲಿಕ ಬದಲಾವಣೆ ಸೇರಿವೆ. ಚುಚ್ಚುಮದ್ದಿನ ನಂತರ ಹೆಚ್ಚಿದ ಹೃದಯ ಬಡಿತ, ದೌರ್ಬಲ್ಯ ಮತ್ತು ಗಂಟಲು ನೋವಿನ ಸಮಸ್ಯೆ ಕಾಣಿಸುತ್ತದೆ. ಎಲ್ಲರಲ್ಲೂ ಈ ಲಕ್ಷಣಗಳು ಕಾಣಿಸುತ್ತವೆ ಎಂದಲ್ಲ. ಕೆಲವರಲ್ಲಿ ಯಾವುದೇ ಪರಿಣಾಮ ಕಾಣಿಸುವುದಿಲ್ಲ.  ಕೊರೊನಾ ಲಸಿಕೆ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ಇದನ್ನು ಪಡೆಯುವ ಅವಶ್ಯಕತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...