alex Certify BIG SHOCKING: ಒಂದೇ ದಿನ 5279 ಮಂದಿಗೆ ಸೋಂಕು; 32 ಜನ ಸಾವು –ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಒಂದೇ ದಿನ 5279 ಮಂದಿಗೆ ಸೋಂಕು; 32 ಜನ ಸಾವು –ಇಲ್ಲಿದೆ ಜಿಲ್ಲಾವಾರು ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ ಕೊರೋನಾ ಭಾರಿ ಸ್ಫೋಟವಾಗಿದ್ದು, ಒಂದೇ ದಿನ 5279 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,20,434 ಕ್ಕೆ ಏರಿಕೆಯಾಗಿದೆ.

ಇವತ್ತು ಒಂದೇ ದಿನ 1856 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,65,275 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 32 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೆ ಮೃತಪಟ್ಟ ಸೋಂಕಿತರ ಸಂಖ್ಯೆ 12,657 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಬರೋಬ್ಬರಿ 42,483 ಸಕ್ರಿಯ ಪ್ರಕರಣಗಳು ಇದ್ದು, 345 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೂಡ ಇವತ್ತು ಕೊರೋನಾ ಸ್ಪೋಟವಾಗಿದೆ. ಒಂದೇ ದಿನ 3728 ಜನರಿಗೆ ಸೋಂಕು ತಗುಲಿದೆ. ಇವತ್ತು 18 ಮಂದಿ ಸೋಂಕಿತರು ಮೃತಪಟ್ಟಿದ್ದು, 30,782 ಸಕ್ರಿಯ ಪ್ರಕರಣಗಳು ಇವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...