alex Certify ನಿರ್ಮಾಣವಾದ 5 ದಿನದಲ್ಲಿ ನೆಲಕ್ಕುರುಳಿದ ಕೊರೊನಾ ಮಾತಾ ದೇಗುಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಮಾಣವಾದ 5 ದಿನದಲ್ಲಿ ನೆಲಕ್ಕುರುಳಿದ ಕೊರೊನಾ ಮಾತಾ ದೇಗುಲ

ಕೋವಿಡ್ ಸಾಂಕ್ರಮಿಕದಿಂದ ಮನುಕುಲವನ್ನು ಮುಕ್ತಗೊಳಿಲು ಪ್ರಾರ್ಥಿಸಿ ಉತ್ತರ ಪ್ರದೇಶದ ಶುಕುಲ್ಪುರ ಗ್ರಾಮದ ಮಂದಿ ’ಕೊರೊನಾ ಮಾತಾ’ ದೇಗುಲ ನಿರ್ಮಿಸಿದ್ದರು. ಜೂನ್ 7ರಂದು ನಿರ್ಮಿಸಿದ್ದ ಈ ದೇಗುಲವನ್ನು ಶುಕ್ರವಾರ ರಾತ್ರಿ ಉರುಳಿಸಲಾಗಿದೆ.

ಈ ದೇಗುಲವನ್ನು ಪೊಲೀಸರು ಉರುಳಿಸಿದ್ದಾರೆ ಎಂದು ಗ್ರಾಮಸ್ಥರು ಆಪಾದಿಸಿದ್ದಾರೆ. ಆದರೆ ಈ ಆಪಾದನೆ ನಿರಾಕರಿಸಿದ ಪೊಲೀಸರು, ದೇಗುಲವನ್ನು ವಿವಾದಿತ ಸ್ಥಳದಲ್ಲಿ ನಿರ್ಮಿಸಿದ್ದ ಕಾರಣ ಅದನ್ನು ಕೆಡವಲಾಗಿದೆ ಎಂದಿದ್ದಾರೆ.

ಸ್ಥಳೀಯ ಮಂದಿಯ ದೇಣಿಗೆಯ ನೆರವಿನಿಂದ ಲೋಕೇಶ್ ಕುಮಾರ್‌ ಶ್ರೀವಾಸ್ತವ ಎಂಬ ವ್ಯಕ್ತಿ ಈ ದೇಗುಲವನ್ನು ಐದು ದಿನಗಳ ಹಿಂದೆ ನಿರ್ಮಿಸಿದ್ದರು.

ಪಾಕಿಸ್ತಾನ ಸೂಪರ್ ಲೀಗ್: ಡೈವಿಂಗ್ ವೇಳೆ ಡಿಕ್ಕಿ, ಡು ಪ್ಲೆಸಿಸ್ ಆಸ್ಪತ್ರೆಗೆ ದಾಖಲು

ದೇಗುಲದಲ್ಲಿ ಕೊರೊನಾ ಮಾತಾ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ರಾಧೇ ಶ್ಯಾಮ್ ವರ್ಮಾ ಎಂಬ ಗ್ರಾಮಸ್ಥರನ್ನು ಮೂರ್ತಿಗೆ ಪೂಜೆ ಮಾಡಲು ನೇಮಕ ಮಾಡಲಾಗಿತ್ತು.

ನೋಯಿಡಾದಲ್ಲಿ ನೆಲೆಸಿರುವ ಲೋಕೇಶ್‌ ಈ ದೇಗುಲ ಕಟ್ಟಿದ ಜಾಗವನ್ನು ನಾಗೇಶ್ ಕುಮಾರ್‌ ಶ್ರೀವಾಸ್ತವ ಮತ್ತು ಜೈಪ್ರಕಾಶ್ ಶ್ರಿವಾಸ್ತವರೊಂದಿಗೆ ಜಂಟಿಯಾಗಿ ಮಾಲೀಕತ್ವ ಹೊಂದಿದ್ದಾರೆ. ದೇಗುಲ ನಿರ್ಮಾಣವಾದ ಬಳಿಕ ಲೋಕೇಶ್ ನೋಯಿಡಾ ಬಿಟ್ಟು ಹೋಗಿದ್ದಾರೆ. ಈ ಜಮೀನನ್ನು ಪೂರ್ತಿಯಾಗಿ ಕಬಳಿಸಲು ಲೋಕೇಶ್ ಹೀಗೆ ಮಾಡಿದ್ದಾರೆ ಎಂಬ ಆಪಾದನೆಯನ್ನು ಇನ್ನಿಬ್ಬರು ಖಾತೆದಾರರು ಮಾಡಿದ್ದಾರೆ.

BIG NEWS: ತೀವ್ರ ಕುತೂಹಲ ಮೂಡಿಸಿದ ಅರವಿಂದ್ ಬೆಲ್ಲದ್ – ಬಿ.ಎಲ್. ಸಂತೋಷ್ ಭೇಟಿ

ವಿವಾದದಲ್ಲಿ ಭಾಗಿಯಾಗಿದ್ದ ಪಾರ್ಟಿಯೊಬ್ಬರು ಈ ದೇಗುಲವನ್ನು ಉರುಳಿಸಿದ್ದಾರೆ ಎಂದು ಸಂಘೀಪುರ ಪೊಲೀಸ್ ಠಾಣಾಧಿಕಾರಿ ತುಶಾರ್‌ದತ್‌ ತ್ಯಾಗಿ ತಿಳಿಸಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿರುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...