alex Certify BIG BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಇವತ್ತೂ ಕೊರೋನಾ ಭಾರೀ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಇವತ್ತೂ ಕೊರೋನಾ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ ಕೊರೊನಾ ಸೋಂಕು ಇಳಿಮುಖವಾಗಿದ್ದು, 559 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 29,62,967 ಕ್ಕೆ ಏರಿಕೆಯಾಗಿದೆ.

ಇವತ್ತು 12 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 37,529 ಜನ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇವತ್ತು 1034 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,09,656 ಮಂದಿ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.52 ರಷ್ಟು ಇದೆ. 15,754 ಸಕ್ರಿಯ ಪ್ರಕರಣಗಳಿವೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 231 ಜನರಿಗೆ ಸೋಂಕು ತಗುಲಿದ್ದು, 4 ಜನ ಮೃತಪಟ್ಟಿದ್ದಾರೆ. 302 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, 7,136 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿತರ ಮಾಹಿತಿ:

ಬಾಗಲಕೋಟೆ 0, ಬಳ್ಳಾರಿ 2, ಬೀದರ್ 1, ಚಾಮರಾಜನಗರ 3, ಚಿಕ್ಕಬಳ್ಳಾಪುರ 1, ಚಿತ್ರದುರ್ಗ 2, ಧಾರವಾಡ 1, ಗದಗ 0, ಹಾವೇರಿ 1, ಕಲಬುರ್ಗಿ 3, ಕೊಪ್ಪಳ 1, ರಾಯಚೂರು 1, ರಾಮನಗರ 0, ವಿಜಯಪುರ 1, ಯಾದಗಿರಿ 1, ಬೆಂಗಳೂರು 231, ದಕ್ಷಿಣಕನ್ನಡ 87, ಉಡುಪಿ 57 ಹೊಸ ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 4, ದಕ್ಷಿಣ ಕನ್ನಡ 5, ಕೊಡಗು 1, ಶಿವಮೊಗ್ಗ 1, ಉತ್ತರಕನ್ನಡ 1 ಸೇರಿ ರಾಜ್ಯದಲ್ಲಿ 12 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...