alex Certify BIG NEWS: ತುಮಕೂರು, ಮೈಸೂರು, ಹಾಸನ ಸೇರಿ ಜಿಲ್ಲೆಗಳಲ್ಲೂ ಕೊರೋನಾ ದಿಢೀರ್ ಏರಿಕೆ, ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತುಮಕೂರು, ಮೈಸೂರು, ಹಾಸನ ಸೇರಿ ಜಿಲ್ಲೆಗಳಲ್ಲೂ ಕೊರೋನಾ ದಿಢೀರ್ ಏರಿಕೆ, ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 28,723 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ, 14 ಜನ ಸೋಂಕಿತರು ಮೃತಪಟ್ಟಿದ್ದಾರೆ. 3105 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 31,52,247 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 38,411 ಜನ ಸೋಂಕಿತರು ಮೃತಪಟ್ಟಿದ್ದಾರೆ. 29,73,470 ಜನ ಗುಣಮುಖರಾಗಿದ್ದಾರೆ. 1,41,337 ಸಕ್ರಿಯ ಪ್ರಕರಣಗಳು ಇವೆ. ಪಾಸಿಟಿವಿಟಿ ದರ ಶೇಕಡ 12.98 ರಷ್ಟು ಇದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 20,121 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 7 ಜನ ಸಾವನ್ನಪ್ಪಿದ್ದಾರೆ. 1695 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,09,312 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲಾವಾರು ಮಾಹಿತಿ:

ಬಳ್ಳಾರಿ 400, ಬೆಳಗಾವಿ 227, ಬೆಂಗಳೂರು ಗ್ರಾಮಾಂತರ 418, ಬೀದರ್ 131, ಚಾಮರಾಜನಗರ 106, ಚಿಕ್ಕಬಳ್ಳಾಪುರ 246, ಚಿಕ್ಕಮಗಳೂರು 174, ಚಿತ್ರದುರ್ಗ 104, ದಕ್ಷಿಣಕನ್ನಡ 639, ದಾವಣಗೆರೆ 187, ಧಾರವಾಡ 338, ಗದಗ 110, ಹಾಸನ 654, ಕಲಬುರ್ಗಿ 338, ಕೊಡಗು 104, ಕೋಲಾರ 502, ಮಂಡ್ಯ 554, ಮೈಸೂರು 803, ರಾಯಚೂರು 172, ರಾಮನಗರ 239, ಶಿವಮೊಗ್ಗ 315, ತುಮಕೂರು 796, ಉಡುಪಿ 497, ಉತ್ತರಕನ್ನಡ 301, ವಿಜಯಪುರ 106 ಹೊಸ ಪ್ರಕರಣ ವರದಿಯಾಗಿವೆ.

ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 7, ಮಂಡ್ಯ 1, ಮೈಸೂರು 2, ಚಿಕ್ಕಬಳ್ಳಾಪುರ 1 ಸೇರಿ ರಾಜ್ಯದಲ್ಲಿ 14 ಜನ ಸೋಂಕಿತರು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...