alex Certify ಬಲವಂತದ ಮತಾಂತರ: ಪತ್ನಿ, ಮಾವನ ವಿರುದ್ಧವೇ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲವಂತದ ಮತಾಂತರ: ಪತ್ನಿ, ಮಾವನ ವಿರುದ್ಧವೇ ದೂರು

ಚಿತ್ರದುರ್ಗ: ಬಲವಂತದ ಮತಾಂತರ ಆರೋಪದ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಾವನ ವಿರುದ್ಧ ವ್ಯಕ್ತಿಯೊಬ್ಬರು ಹೊಸುದರ್ಗ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಹೊಸದುರ್ಗದ ಜಂಗಮನಗರ ನಿವಾಸಿಯಾಗಿರುವ ಸರಳಾ ಅವರೊಂದಿಗೆ 2020 ರ ಜುಲೈ 6 ರಂದು ವಿಜಯನಗರ ಜಿಲ್ಲೆ ಹೊಸಪೇಟೆ ಬುಡ್ಡಜಂಗಮ ಕಾಲೋನಿಯ ಮಾರಪ್ಪ ಅವರ ಮದುವೆ ನೆರವೇರಿತ್ತು. ಸರಳಾ ತಂದೆ ವಸಂತಕುಮಾರ್ ಮತ್ತು ಇತರರು ಮತಾಂತರ ಮಾಡಿ ಕ್ರಿಶ್ಚಿಯನ್ ಪದ್ಧತಿಯಂತೆ ಮದುವೆ ಮಾಡಿದ್ದಾರೆ ಎನ್ನಲಾಗಿದೆ.

ಮಾರಪ್ಪ ಹಿಂದೂ ದೇವರ ಪೂಜೆ ಮಾಡಿದಾಗ ಪತ್ನಿ ಸರಳಾ ಮತ್ತು ಮಾವ ವಸಂತಕುಮಾರ್ ಆಕ್ಷೇಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 2 ರಂದು ವಸಂತಕುಮಾರ್ ಮಗಳನ್ನು ಹೆರಿಗೆಗೆ ತವರುಮನೆಗೆ ಕರೆದುಕೊಂಡು ಹೋಗಿದ್ದು, ಪತ್ನಿ ಮಗುವನ್ನು ನೋಡಲು ಹೋದಾಗ ಆಕೆಯ ತವರುಮನೆಯವರು ಗಲಾಟೆ ಮಾಡಿದ್ದಾರೆ. ಕ್ರಿಶ್ಚಿಯನ್ ಧರ್ಮ ಪಾಲಿಸಬೇಕೆಂದು ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿ ಮಾರಪ್ಪ ಹೊಸದುರ್ಗ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...