alex Certify ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಬಳಿಕ ಮದುವೆ ಮುರಿದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮ್ಮತಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಬಳಿಕ ಮದುವೆ ಮುರಿದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮುಂದೆ ಮದುವೆಯಾಗುತ್ತೇನೆಂಬ ನಂಬಿಕೆಯಲ್ಲಿ ಸಮ್ಮತಿಯ ದೈಹಿಕ ಸಂಬಂಧವನ್ನು ಬೆಳೆಸಿದ ಬಳಿಕ ಕಾರಣಾಂತರಗಳಿಂದ ಆ ಮದುವೆ ನಿಂತು ಹೋದರೆ ಆಗ ಅದನ್ನು ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪನ್ನು ನೀಡಿದೆ.

ಭುವನೇಶ್ವರ ಮೂಲದ ವ್ಯಕ್ತಿಯೊಬ್ಬರ ಮೇಲೆ ಹೊರಿಸಲಾಗಿದ್ದ ಆರೋಪವನ್ನು ಹೈಕೋರ್ಟ್ ರದ್ದು ಮಾಡಿದೆ. ಅರ್ಜಿದಾರರ ಸ್ನೇಹಿತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಕಳೆದ ಐದು ವರ್ಷಗಳಿಂದ ತಮ್ಮ ಪತಿಯೊಂದಿಗೆ ವೈಮನಸ್ಯ ಹೊಂದಿದ್ದರು. ಇದೇ ಮಹಿಳೆಯು ಅತ್ಯಾಚಾರ ಆರೋಪ ಮಾಡಿದ್ದರು.

ಅರ್ಜಿದಾರರ ವಿರುದ್ಧದ ಇತರ ಆರೋಪಗಳಾದ ವಂಚನೆಯನ್ನು ತನಿಖೆಗೆ ಮುಕ್ತವಾಗಿ ಬಿಡಲಾಗಿದೆ ಎಂದು ನ್ಯಾಯಮೂರ್ತಿ ಆರ್ ಕೆ ಪಟ್ನಾಯಕ್ ಆದೇಶದಲ್ಲಿ ತಿಳಿಸಿದ್ದಾರೆ. ಒಳ್ಳೆಯ ಉದ್ದೇಶದಿಂದ ನೀಡಿದ ಭರವಸೆಯು ಸಾಕಾರಗೊಳಿಸಲು ಸಾಧ್ಯವಾಗದೇ ಇದ್ದರೆ ಅದನ್ನು ಅಪರಾಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಲೈಂಗಿಕವಾಗಿ ಅನ್ಯೋನ್ಯವಾಗಿದ್ದಾರೆ ಎಂದ ಮಾತ್ರಕ್ಕೆ ಅದನ್ನು ಐಪಿಸಿ ಸೆಕ್ಷನ್​ 376 ಅಡಿಯಲ್ಲಿ ಅಪರಾಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಜುಲೈ ಮೂರರಂದು ನೀಡಿದ ಆದೇಶದಲ್ಲಿ ಒರಿಸ್ಸಾ ಹೈಕೋರ್ಟ್ ತಿಳಿಸಿದೆ.

ಸಂತ್ರಸ್ತೆಗೆ ವಿವಾಹದ ಆಶ್ವಾಸನೆಯನ್ನು ನೀಡಿ ಇಬ್ಬರು ದೈಹಿಕ ಸಂಬಂಧವನ್ನು ಸಮ್ಮತಿಯ ಮೇಲೆ ಹೊಂದಿದ್ದರೆ ಕೆಲವು ಕಾರಣಗಳಿಂದ ಮದುವೆ ಮಾಡಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಕೊಟ್ಟ ಭರವಸೆ ಉಲ್ಲಂಘಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಅದನ್ನು ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ನೀಡಿದ ಆದೇಶವನ್ನು ಹೈಕೋರ್ಟ್ ಗಮನಿಸಿದೆ.

ಆರಂಭದಲ್ಲಿ ಚೆನ್ನಾಗಿದ್ದ ಸಂಬಂಧವೊಂದು ಕಾಲಾಂತರದಲ್ಲಿ ಹಳಸಿಹೋದರೆ ಆಗ ಲೈಂಗಿಕ ಸಂಬಂಧದಲ್ಲಿ ಪುರುಷರನ ಪಾಲನ್ನು ಅತ್ಯಾಚಾರ ಎಂದು ಹೇಳುವುದು ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...