alex Certify BIG NEWS: ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಮಾತು ಹಿನ್ನೆಲೆ; ಮುಕುಡಪ್ಪ ನಿವಾಸಕ್ಕೆ ಕೈ ಕಾರ್ಯಕರ್ತರು, ಬೆಂಬಲಿಗರ ಮುತ್ತಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಮಾತು ಹಿನ್ನೆಲೆ; ಮುಕುಡಪ್ಪ ನಿವಾಸಕ್ಕೆ ಕೈ ಕಾರ್ಯಕರ್ತರು, ಬೆಂಬಲಿಗರ ಮುತ್ತಿಗೆ

ಬೆಂಗಳೂರು: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದ ಕುರುಬ ಸಮುದಾಯದ ಮುಖಂಡ ಮುಕುಡಪ್ಪ ನಿವಾಸಕ್ಕೆ ಸಿದ್ದರಾಮಯ್ಯ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ವಿಜಯನಗರದಲ್ಲಿರುವ ಮುಕುಡಪ್ಪ ಅವರ ಮನೆಗೆ ಮುತ್ತಿಗೆ ಹಾಕಿರುವ ಸಿದ್ದರಾಮಯ್ಯ ಬೆಂಬಲಿಗರು, ಮುಕುಡಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಬಾಗಿಲಿಗೆ ಪೋಸ್ಟರ್ ಗಳನ್ನು ಅಂಟಿಸಿ, ಮಸಿ ಬಳಿದು ಧಿಕ್ಕಾರ ಕೂಗಿದ್ದಾರೆ.

ಸುದ್ದಿಗೋಷ್ಠಿಯ ವೇಳೆ ಕುರುಬ ಸಮುದಾಯದ ಮುಖಂಡ ಮುಕುಡಪ್ಪ ಹಾಗೂ ಎಸ್ ಪುಟ್ಟಸ್ವಾಮಿ ಇಬ್ಬರೂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿಯಾಗಿ ಗುಸು ಗುಸು ಮಾತನಾಡುತ್ತಿದ್ದ ಆಡಿಯೋ-ವಿಡಿಯೋ ವೈರಲ್ ಆಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...