alex Certify “ಈ ಕಾರಣಕ್ಕೆ 2028ರ ವೇಳೆಗೆ ಒಂದೇ ಆಗಲಿದೆ ಹಿಂದೂ-ಮುಸ್ಲಿಂ ಜನಸಂಖ್ಯೆ’’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

“ಈ ಕಾರಣಕ್ಕೆ 2028ರ ವೇಳೆಗೆ ಒಂದೇ ಆಗಲಿದೆ ಹಿಂದೂ-ಮುಸ್ಲಿಂ ಜನಸಂಖ್ಯೆ’’

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್, ಮತ್ತೊಮ್ಮೆ ಹಿಂದೂಗಳು ಮತ್ತು ಮುಸ್ಲಿಮರ ಜನಸಂಖ್ಯೆ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ದಿಗ್ವಿಜಯ್ ಸಿಂಗ್ ಮತ್ತೊಂದು ವಿವಾದ ಹುಟ್ಟು ಹಾಕಿದ್ದಾರೆ. 2028ರ ವೇಳೆಗೆ ಎರಡೂ ಧರ್ಮದ ಜನಸಂಖ್ಯೆ ಒಂದೇ ಆಗಲಿದೆ. ಆಗ ದೇಶದ ಜನಸಂಖ್ಯೆ ಸ್ಥಿರಗೊಳ್ಳುತ್ತದೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಸದ್ಯ, ಅಧ್ಯಯನವೊಂದರ ವರದಿ ಓದಿದ್ದೇನೆ. ಇದು ಜನಗಣತಿ ದತ್ತಾಂಶವನ್ನು ಆಧರಿಸಿದೆ. 1951 ರ ನಂತ್ರ ಮುಸ್ಲಿಮರ ಫಲವತ್ತತೆ ದರವು ಇಳಿದಿದೆ. ಈ ಹಿಂದೆ ಈ ದರ, ಹಿಂದುಗಳಿಗಿಂತ ಹೆಚ್ಚಿತ್ತು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ದೇಶದಲ್ಲಿ ಮುಸ್ಲಿಮರ ಫಲವತ್ತತೆ ದರವು ಶೇಕಡಾ 2.7 ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಿಂದೂಗಳ ಈ ಪ್ರಮಾಣವು ಶೇಕಡಾ 2.3 ರಷ್ಟಿದೆ. ಈ ದರದ ಪ್ರಕಾರ, 2028 ರ ಹೊತ್ತಿಗೆ, ಹಿಂದುಗಳು ಮತ್ತು ಮುಸ್ಲಿಮರ ಜನಸಂಖ್ಯೆ ಬಹುತೇಕ ಒಂದೇ ಆಗಲಿದೆ ಎಂದವರು ಹೇಳಿದ್ದಾರೆ.

10 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು ಹಿಂದೂಗಳಿಗಿಂತ ಹೆಚ್ಚಾಗುತ್ತದೆ ಎಂದು ಕೆಲವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...