alex Certify ನಂತರ ಕಾಂಡೋಮ್ ಕೇಳ್ತಿರಾ ಎಂದು ಐಎಎಸ್ ಅಧಿಕಾರಿ ಅಣಕಿಸಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂತರ ಕಾಂಡೋಮ್ ಕೇಳ್ತಿರಾ ಎಂದು ಐಎಎಸ್ ಅಧಿಕಾರಿ ಅಣಕಿಸಿದ್ದ ವಿದ್ಯಾರ್ಥಿನಿಗೆ ಒಂದು ವರ್ಷ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ

ಪಾಟ್ನಾ: ನಂತರ ಕಾಂಡೋಮ್ ಕೇಳ್ತಿರಾ ಎಂದುಬಿಹಾರದ ಐಎಎಸ್ ಅಧಿಕಾರಿಯಿಂದ ಅಣಕಿಸಲ್ಪಟ್ಟ ವಿದ್ಯಾರ್ಥಿನಿಗೆ ಒಂದು ವರ್ಷ ಉಚಿತ ಸ್ಯಾನಿಟರಿ ಪ್ಯಾಡ್ ಪೂರೈಕೆ ಮಾಡಲಾಗುವುದು.

ಋತುಚಕ್ರದ ನೈರ್ಮಲ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಸಬ್ಸಿಡಿ ಬೆಲೆಯಲ್ಲಿ ಸ್ಯಾನಿಟರಿ ಪ್ಯಾಡ್‌ ಗಳನ್ನು ನೀಡುವಂತೆ ಒತ್ತಾಯಿಸಿದ ವೇಳೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ(ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಭಾಮ್ರಾ ಅವರಿಂದ ‘ಮುಂದೆ ಕಾಂಡೋಮ್ ಕೇಳ್ತಿರಾ’ ಎಂದು ಹೇಳಿಸಿಕೊಂಡಿದ್ದ ಪಾಟ್ನಾದ 19 ವರ್ಷದ ವಿದ್ಯಾರ್ಥಿನಿ ರಿಯಾ ಕುಮಾರಿಗೆ, ಖಾಸಗಿ ಸ್ಯಾನಿಟರಿ ಪ್ಯಾಡ್ ತಯಾರಕ ಕಂಪನಿಯಿಂದ ಒಂದು ವರ್ಷದವರೆಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಉಚಿತವಾಗಿ ಪೂರೈಕೆ ಭರವಸೆ ನೀಡಲಾಗಿದೆ.

ರಿಯಾ ಪಾಟ್ನಾದ ಕಮಲಾ ನೆಹರು ನಗರದ ಕೊಳೆಗೇರಿಯಲ್ಲಿ ನೆಲೆಸಿದ್ದಾರೆ. ಸ್ಥಳೀಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಯ ಕುಟುಂಬದಲ್ಲಿ 10ನೇ ತರಗತಿ ತೇರ್ಗಡೆಯಾಗಿರುವ ಏಕೈಕ ವ್ಯಕ್ತಿ ಆಕೆ. ಕೂಲಿ ಕೆಲಸ ಮಾಡುತ್ತಿದ್ದ ಆಕೆಯ ತಂದೆ ಅನಾರೋಗ್ಯದಿಂದ ಕಳೆದ ವರ್ಷ ನಿಧನರಾಗಿದ್ದಾರೆ.

ಸ್ಯಾನಿಟರಿ ಪ್ಯಾಡ್ ತಯಾರಿಕಾ ಕಂಪನಿ  PAN ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್ ಸಾರ್ವಜನಿಕ ವೇದಿಕೆಯಲ್ಲಿ ಸ್ಪಷ್ಟವಾಗಿ ಮಾತನಾಡಿದ ರಿಯಾ ಅವರ ಧೈರ್ಯವನ್ನು ಶ್ಲಾಘಿಸಿ ಸ್ಯಾನಿಟರಿ ವರ್ಷಪೂರ್ತಿ ಪೂರೈಕೆ ಮಾಡುವುದಾಗಿ ಘೋಷಿಸಿದೆ.

ಋತುಚಕ್ರದ ನೈರ್ಮಲ್ಯವನ್ನು ನಿಷೇಧಿತ ವಿಷಯವೆಂದು ಪರಿಗಣಿಸಲಾಗಿದೆ. ಇದು ಬದಲಾಗಬೇಕು. ಇನ್ನೂ ಅನೇಕ ಹುಡುಗಿಯರು ಮುಕ್ತ ಚರ್ಚೆಗೆ ಧೈರ್ಯದಿಂದ ಒತ್ತಾಯಿಸಬೇಕು. ಸಾರ್ವಜನಿಕವಾಗಿ ಈ ವಿಷಯದ ಬಗ್ಗೆ ಮಾತನಾಡಿದ ರಿಯಾ ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ ಎಂದು ಪ್ಯಾನ್ ಹೆಲ್ತ್‌ ಕೇರ್ ಪ್ರೈವೇಟ್ ಲಿಮಿಟೆಡ್‌ ನ ಸಿಇಒ ಚಿರಾಗ್ ಪಾನ್ ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...