alex Certify Asia Cup: ಕೊಹ್ಲಿ ಮರಳಿ ಮತ್ತೆ ಫಾರ್ಮ್‌ ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Asia Cup: ಕೊಹ್ಲಿ ಮರಳಿ ಮತ್ತೆ ಫಾರ್ಮ್‌ ಕಂಡುಕೊಳ್ಳುವ ನಿರೀಕ್ಷೆಯಲ್ಲಿ ಅಭಿಮಾನಿಗಳು

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಒಂದು ವಿರಾಮದ ಬಳಿಕ ಮುಂಬರುವ ಏಷ್ಯಾ ಕಪ್ 2022ರಲ್ಲಿ ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ.

ಕಳೆದೆರಡು ವರ್ಷಗಳಿಂದ ಅತ್ಯುತ್ತಮ ಫಾರ್ಮ್‌ನಲ್ಲಿ ಇಲ್ಲದ ಕೊಹ್ಲಿ, ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿಯಲಿದ್ದಾರೆ.

ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಗಳಿಂದ ಅವರು ಗೈರುಹಾಜರಾಗಿದ್ದರು. ಕೊಹ್ಲಿಯ ಕೊನೆಯ ಅಂತರಾಷ್ಟ್ರೀಯ ಶತಕವು 2019 ರಲ್ಲಿ ಬಂದಿತ್ತು. ಅಂದಿನಿಂದ ಅವರು ಅರ್ಧಶತಕಗಳನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ವಿಫಲರಾಗಿದ್ದಾರೆ.

ಆದರೆ ಕೊಹ್ಲಿ ಕ್ರಿಕೆಟ್ ರಂಗದಲ್ಲಿ ಪ್ರಾಬಲ್ಯ ಸಾಧಿಸಿರುವುದನ್ನು ವರ್ಷಗಳಿಂದ ವೀಕ್ಷಿಸುತ್ತಿರುವ ನಿಷ್ಠಾವಂತ ಕ್ರಿಕೆಟ್ ಅಭಿಮಾನಿಗಳು ಅವರು ಮತ್ತೆ ಮೆರೆಯುತ್ತಾರೆ ಎಂದು ನಂಬಿಕೆ ಇಟ್ಟುಕೊಂಡಿದ್ದಾರೆ.

ಇದು ರಾಕೆಟ್ ವಿಜ್ಞಾನವಲ್ಲ. ದೊಡ್ಡ ಆಟಗಾರರು ಸರಿಯಾದ ಸಮಯದಲ್ಲಿ ಇದು ಪ್ರತಿಬಿಂಬಿಸುವ ಸಮಯ ಎಂದು ನನಗೆ ಖಾತ್ರಿಯಿದೆ. ಅವರು ಉತ್ತಮವಾಗಿ ಏನು ಮಾಡಬಹುದೆಂಬುದನ್ನು ಅವರು ಮಾಡುತ್ತಾರೆ ಎಂದು ಮಾಜಿ‌ಕೋಚ್ ಶಾಸ್ತ್ರಿ ಹೇಳಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈಗಲೇ ಅಬ್ಬರಿಸಲು ಪ್ರಾರಂಭಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...