alex Certify ’ನನ್ನನ್ನು ಕ್ಯಾಮೆರಾದಲ್ಲಿ ತೋರಬೇಡಿ…….’: ಸುಳ್ಳು ಹೇಳಿ ರಜೆ ಹಾಕಿ ಮ್ಯಾಚ್ ನೋಡಲು ಬಂದ ಯುವತಿ ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ನನ್ನನ್ನು ಕ್ಯಾಮೆರಾದಲ್ಲಿ ತೋರಬೇಡಿ…….’: ಸುಳ್ಳು ಹೇಳಿ ರಜೆ ಹಾಕಿ ಮ್ಯಾಚ್ ನೋಡಲು ಬಂದ ಯುವತಿ ಬೇಡಿಕೆ

ಭಾರತದಲ್ಲಿ ಐಪಿಎಲ್‌ನ ಕ್ರೇಜ಼್‌ ಯಾವ ಮಟ್ಟದಲ್ಲಿ ಇರುತ್ತದೆ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ತಂತಮ್ಮ ಊರುಗಳ ಹೆಸರಿನಲ್ಲಿರುವ, ಅಥವಾ ತಂತಮ್ಮ ಮೆಚ್ಚಿನ ಆಟಗಾರರು ಪ್ರತಿನಿಧಿಸುವ ತಂಡಗಳನ್ನು ಹುರಿದುಂಬಿಸಲು ಮೈದಾನಕ್ಕೆ ಬರುವ ಯುವ ಸಮೂಹ ಈ ಕ್ರಿಕೆಟ್‌ ಜಾತ್ರೆಗೆ ಇನ್ನಷ್ಟು ಬಣ್ಣ ತುಂಬುತ್ತಾರೆ.

ಅನಾರೋಗ್ಯವೇ ಇರಲಿ, ಕಚೇರಿಯಲ್ಲಿನ ಕೆಲಸದೊತ್ತಡವೇ ಇರಲಿ, ತಮ್ಮ ಮೆಚ್ಚಿನ ತಂಡದ ಪಂದ್ಯವಿದ್ದಾಗ ಜನರಿಗೆ ಅದಕ್ಕಾಗಿ ಸಮಯ ಇದ್ದೇ ಇರುತ್ತದೆ. ಬಹಳಷ್ಟು ಮಂದಿ ಕ್ರೀಡಾಂಗಣಕ್ಕೇ ಬಂದು ತಮ್ಮ ತಂಡವನ್ನು ಹುರಿದುಂಬಿಸಲು ಇಚ್ಛಿಸುತ್ತಾರೆ. ಈ ವೇಳೆ ಪಂದ್ಯ ಪ್ರಸಾರದಲ್ಲಿ ಬರುವ ಇಚ್ಚೆಯಿಂದ ಯುವಕರು ಹಾಗೂ ಯುವತಿಯರು ಚಿತ್ತಾಕರ್ಷಕವಾದ ಭಿತ್ತಿ ಪತ್ರಗಳನ್ನು ತಂದಿರುತ್ತಾರೆ.

ಅಹಮದಾಬಾದ್‌ನಲ್ಲಿ ಮೊನ್ನೆ ಮೊನ್ನೆ ನಡೆದ ಪ್ಲೇಆಫ್ ಸುತ್ತಿನ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ಮತ್ತು ಮುಂಬಯಿ ಇಂಡಿಯನ್ಸ್ ನಡುವಿನ ಕಾಳಗ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸಿದ್ದ ಯುವತಿಯೊಬ್ಬಳು ಬಹುಶಃ ಈ ಪಂದ್ಯ ನೋಡಲು ’ತನಗೆ ಹುಶಾರಿಲ್ಲ’ ಎಂದು ಹೇಳಿ ರಜೆ ಪಡೆದು ಬಂದಂತೆ ತೋರುತ್ತದೆ.

“ಕ್ಯಾಮೆರಾದಲ್ಲಿ ನನ್ನನ್ನು ಸೆರೆ ಹಿಡಿಯಬೇಡಿ. ನನಗೆ ಆರೋಗ್ಯ ಸರಿಯಿಲ್ಲ ಎಂದು ನನ್ನ ಸಹೋದ್ಯೋಗಿಗಳು ಭಾವಿಸಿದ್ದಾರೆ,” ಎಂದು ಹೇಳುವ ಭಿತ್ತಿ ಪತ್ರ ಹಿಡಿದ ಈಕೆ ತನ್ನ ಮುಖವನ್ನು ಭಿತ್ತಿಪತ್ರದಿಂದ ಮುಚ್ಚಿದ್ದಾಳೆ.

ಪಕ್ಕದಲ್ಲೇ ಇದ್ದ ಮತ್ತೊಬ್ಬರು, ” ಈಕೆ ಸ್ವಿಗ್ಗಿಯ ಅಡ್ಮಿನ್,” ಎಂದು ಆಕೆಯತ್ತ ಬಾಣದ ಗುರುತಿರುವ ಮತ್ತೊಂದು ಭಿತ್ತಿ ಪತ್ರ ಹಿಡಿದಿದ್ದಾರೆ.

ಶಿವಾನಿ ಹೆಸರಿನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಈ ಚಿತ್ರವನ್ನು ಶೇರ್‌ ಮಾಡಲಾಗಿದ್ದು, “ಟಾಸ್ಕ್ ಫೇಲ್ಡ್‌ ಸಕ್ಸಸ್‌ಫುಲಿ,” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

“4ಕೆಯಲ್ಲಿ ಸಿಕ್ಕಿಕೊಂಡಿದ್ದಾಳೆ,” ಎಂದು ಒಬ್ಬರು ಕಾಮೆಂಟ್ ಮಡಿದರೆ, “ಶುಭ್ಮನ್ ಗಿಲ್ ಬ್ಯಾಟ್ ಮಾಡುವುದನ್ನು ನೋಡಲು ಆಕೆಯ ಸಹೋದ್ಯೋಗಿಗಳೂ ಕೆಲಸ ಬಿಟ್ಟು ಬರುತ್ತಾರೆ,” ಎಂದು ಮತ್ತೊಬ್ಬರು ಕಾಮೆಂಟ್ ಹಾಕಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...