alex Certify ಮುದ್ದು ಪಾಂಡಾಕ್ಕೆ ಇದೇನಾಯ್ತು ? ಮರಿಯ ಪಾಡು ನೋಡಿ ಬಿದ್ದೂ ಬಿದ್ದೂ ನಕ್ಕ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುದ್ದು ಪಾಂಡಾಕ್ಕೆ ಇದೇನಾಯ್ತು ? ಮರಿಯ ಪಾಡು ನೋಡಿ ಬಿದ್ದೂ ಬಿದ್ದೂ ನಕ್ಕ ನೆಟ್ಟಿಗರು

ಪಾಂಡಾಗಳಿಗೆ ಮನಸೋಲದವರೇ ಇಲ್ಲ ಎನ್ನಬಹುದೇನೋ. ಅವು ಅಷ್ಟು ಮುದ್ದಾಗಿರುತ್ತವೆ. ಇವುಗಳ ಆಟ, ತುಂಟಾಟ ಎಲ್ಲವೂ ಚೆಂದವೇ. ಚಿಕ್ಕ ಮಕ್ಕಳಂತೆಯೇ ಇವು ಕೂಡ ತುಂಟಾಟಕ್ಕೆ ಬಹಳ ಫೇಮಸ್​. ಅಂಥದ್ದೇ ಒಂದು ಉಲ್ಲಾಸಭರಿತ ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಪಾಂಡಾದ ಮರಿಗೆ ನೋವಾಗಿದ್ದರೂ, ಅದರ ಆಟವನ್ನು ನೋಡಿ ಜನರು ಸಂತೋಷ ಪಡುತ್ತಿದ್ದಾರೆ. ಗೋಣಿಚೀಲದ ಮೇಲೆ ಆಟವಾಡಲು ಬಯಸಿ, ಕೆಳಗೆ ಬಿದ್ದು ಪಾಂಡಾ ಪಟ್ಟ ವ್ಯಥೆಯ ವಿಡಿಯೋ ಇದಾಗಿದೆ.

ಬ್ಯುಟೆಂಗೆಬೀಡೆನ್ ಎಂಬುವವರು ಈ ವಿಡಿಯೋ ಹಂಚಿಕೊಂಡಿದ್ದು ನೆಟ್ಟಿಗರು ಅಯ್ಯೋ ಪಾಪ ಪಾಂಡ ಎನ್ನುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ಎಂದರೆ ಒಂದು ಕಡೆ ಪಾಂಡಾ ಕುಳಿತಿದೆ. ಇನ್ನೊಂದು ಕಡೆ ಹಗ್ಗಕ್ಕೆ ಕಟ್ಟಿದ ಗೋಣಿಚೀಲ ಅದರ ಮುಂದೆ ತೂಗಾಡುತ್ತಿದೆ. ಇದನ್ನು ನೋಡಿ ಪಾಂಡಾಕ್ಕೆ ಆಡುವ ಮನಸ್ಸಾಗಿದೆ. ಅದರ ಮೇಲೆ ಜಿಗಿಯುವುದು ಹೇಗೆ ಎಂದು ಹಲವು ಬಾರಿ ಲೆಕ್ಕಾಚಾರ ಹಾಕಿದೆ.

ಕೊನೆಗೆ ಏನಾದರೂ ಸರಿ ಹಾರಿಯೇ ಬಿಡೋಣ ಎಂದು ಹಾರಿದೆ. ಆದರೆ ಆಯತಪ್ಪಿ ಕೆಳಕ್ಕೆ ಬಿದ್ದಿದೆ. ಈ ವಿಡಿಯೋ ಇದಾಗಲೇ 3.5 ಮಿಲಿಯನ್ ವೀಕ್ಷಣೆಗಳನ್ನು ಕಂಡಿದ್ದು, ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...