alex Certify ‘ಕ್ಲಬ್ ಹೌಸ್’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕ್ಲಬ್ ಹೌಸ್’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

Clubhouse Launches Spatial Audio Feature to Help Chats Feel Life-Like | Technology News

ಇತ್ತೀಚೆಗೆ ಜನರ ಗಮನ ಸೆಳೆಯುತ್ತಿರುವ ಆ್ಯಪ್ ಗಳಲ್ಲಿ ಕ್ಲಬ್ ಹೌಸ್ ಕೂಡ ಒಂದು. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂನಂತೆಯೇ ಈ ಸೋಷಿಯಲ್ ಆಡಿಯೋ ಆ್ಯಪ್ ಉಳಿದೆಲ್ಲಾ ಆ್ಯಪ್ಗಳಿಗಿಂತ ಕೊಂಚ ಭಿನ್ನವಾಗಿದೆ.

ಇದರ ವಿಶೇಷತೆ ಏನೆಂದರೆ ಇದರಲ್ಲಿ ವಾಯ್ಸ್ ಚಾಟ್ ಮಾಡುವ ಮೂಲಕ ಸಂವಹನ ನಡೆಸಬಹುದಾಗಿದೆ. ಸದ್ಯ ಈ ಆ್ಯಪ್ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲಿದೆ.

ಹೌದು, ಕ್ಲಬ್ ಹೌಸ್ ಆಡಿಯೋ ಚಾಟ್ ಅಪ್ಲಿಕೇಷನ್ ಭಾನುವಾರ ಪ್ರಾದೇಶಿಕ ಆಡಿಯೋ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಿದೆ. ಇದರಲ್ಲಿ ಧ್ವನಿಗಳು ವಿಭಿನ್ನ ದಿಕ್ಕುಗಳಿಂದ ಬರುತ್ತಿರುವಂತೆ ಭಾಸವಾಗುತ್ತದೆ. ಈ ಪ್ರಾದೇಶಿಕ ಆಡಿಯೋ ಮೊದಲು ಐಒಎಸ್ ಬಳಕೆದಾರರಿಗೆ ತೆರೆಯಲಿದ್ದು, ನಂತರ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

BIG BREAKING: ಗಣೇಶೋತ್ಸವಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್, ಸೆ. 5 ರಂದು ವಿಶೇಷ ಸಭೆ

ಕಳೆದ ವರ್ಷ ಆರಂಭಗೊಂಡ ಈ ಆಡಿಯೋ ಆ್ಯಪ್ ಸದ್ಯ ಸಾಕಷ್ಟು ಜನರ ಗಮನ ಸೆಳೆದಿದೆ. ಫೇಸ್ ಬುಕ್, ಟ್ವಿಟ್ಟರ್, ಸ್ಪಾಟಿಫೈನಂತಹ ಟೆಕ್ ದೈತ್ಯರ ಮುಂದೆ ಸ್ಪರ್ಧೆ ಎದುರಿಸುತ್ತಿದೆ. ಯಾಕೆಂದರೆ ಇವೆಲ್ಲವೂ ತಮ್ಮದೇ ಆದ ಸಾಮಾಜಿಕ ಆಡಿಯೋ ಚಾಟ್ ವೈಶಿಷ್ಟ್ಯಗಳನ್ನು ಜನರಿಗೆ ಪರಿಚಯಿಸಿವೆ.

ಇದು ಇನ್ವೈಟ್ ಓನ್ಲಿ ಸೋಷಿಯಲ್ ಆಡಿಯೋ ಆ್ಯಪ್ ಆಗಿದೆ. ಅಂದರೆ, ಯಾರಾದರೂ ನಿಮಗೆ ಆ್ಯಪ್ ಒಳಹೋಗಲು ಅನುಮತಿ ನೀಡಿದರೆ ಅಥವಾ ಯಾರಾದರೂ ಆಮಂತ್ರಣ ನೀಡಿದರೆ ಮಾತ್ರ ನೀವು ಈ ಅಪ್ಲಿಕೇಷನ್ ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...