alex Certify ಬೆತ್ತಲೆ ಫೋಟೋ ಶೂಟ್​ ಮಾಡಿಸಿಕೊಂಡ ರಣವೀರ್​ ಸಿಂಗ್‌ ​ಗೆ ದೇಣಿಗೆಯಾಗಿ ಬಟ್ಟೆ ನೀಡುವ ʼಅಭಿಯಾನʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲೆ ಫೋಟೋ ಶೂಟ್​ ಮಾಡಿಸಿಕೊಂಡ ರಣವೀರ್​ ಸಿಂಗ್‌ ​ಗೆ ದೇಣಿಗೆಯಾಗಿ ಬಟ್ಟೆ ನೀಡುವ ʼಅಭಿಯಾನʼ

ಪೇಪರ್​ ಮ್ಯಾಗಜೀನ್​ಗಾಗಿ ವಿಶೇಷ ಫೋಟೋಶೂಟ್​ ಮಾಡಿಸಿಕೊಂಡ ಬಾಲಿವುಡ್​ ನಟನ ವಿರುದ್ಧ ಜನ ತಿರುಗಿಬಿದ್ದಿದ್ದಾರೆ.

ರಣವೀರ್​ ಸಿಂಗ್​ ಬೆತ್ತಲಾಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧದ ಅಭಿಪ್ರಾಯಗಳು ಬರುತ್ತಿವೆ. ಕೆಲವು ಜನರಂತೂ ರಣವೀರ್​ಗೆ ಬಿಸಿ ಮುಟ್ಟಿಸಲು ಅಭಿಯಾನವೇ ನಡೆಸಿದ್ದಾರೆ. ವಿಡಿಯೋ ವೊಂದರಲ್ಲಿ ಕಾಣಿಸುವಂತೆ ಇಂದೋರ್​ನಲ್ಲಿ ರಣವೀರ್​ಗಾಗಿ ಜನರ ಗುಂಪು ಬಟ್ಟೆ ದೇಣಿಗೆ ಅಭಿಯಾನವನ್ನು ಆಯೋಜಿಸಿದೆ.

ಬೀದಿಯಲ್ಲಿರುವ ಮೇಜಿನ ಮೇಲೆ ಇರಿಸಲಾಗಿರುವ ಪೆಟ್ಟಿಗೆಗೆ ಜನರು ತಮ್ಮ ಬಟ್ಟೆಗಳನ್ನು ದಾನ ಮಾಡುವುದನ್ನು ನೋಡಬಹುದಾಗಿದೆ. ಆ ಬಾಕ್ಸ್​ ಮೇಲೆ ರಣವೀರ್​ನ ಫೋಟೋಶೂಟ್ ​ಫೋಟೋ ಇದೆ.

ಈ ಬಾಲಿವುಡ್​ ನಟನ ನಗ್ನ ಫೋಟೋಶೂಟ್​ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆದ ನಂತರ ಮುಂಬೈ ಪೊಲೀಸರು “ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದ” ಆರೋಪದ ಮೇಲೆ ಆತನ ಮೇಲೆ ಎಫ್​ಐಆರ್​ ದಾಖಲಿಸಿದ್ದಾರೆ.

— Tari Poha (@Alone_Mastt) July 26, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...