alex Certify ನಿಫಾ ಭೀತಿಯಲ್ಲಿದ್ದ ಕೇರಳಕ್ಕೆ ಬಿಗ್​ ರಿಲೀಫ್​​….! ಮೃತ ಬಾಲಕನ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಫಾ ಭೀತಿಯಲ್ಲಿದ್ದ ಕೇರಳಕ್ಕೆ ಬಿಗ್​ ರಿಲೀಫ್​​….! ಮೃತ ಬಾಲಕನ ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್​

ನಿಫಾ ರೋಗ ಲಕ್ಷಣ ಹೊಂದಿದ್ದ 8 ಮಂದಿಯ ವರದಿಯಲ್ಲಿ ನೆಗೆಟಿವ್​ ಬಂದಿದ್ದು ಇದರಿಂದ ಕೇರಳಕ್ಕೆ ದೊಡ್ಡ ರಿಲೀಫ್​ ಸಿಕ್ಕಂತಾಗಿದೆ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಈ ವಿಚಾರವಾಗಿ ಮಾತನಾಡಿದ್ದು ರೋಗ ಲಕ್ಷಣಹೊಂದಿದ್ದವರಿಂದ ತಲಾ ಮೂರು ಮಾದರಿಯ ಸ್ಯಾಂಪಲ್​ ಸಂಗ್ರಹಿಸಲಾಗಿತ್ತು. ಈ ಸ್ಯಾಂಪಲ್​​ಗಳನ್ನು ಎಸ್​ಐವಿಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು ಫಲಿತಾಂಶ ನೆಗೆಟಿವ್​ ಬಂದಿದೆ. ಇನ್ನೂ ಐವರ ವರದಿ ಬರಬೇಕಿದೆ ಎಂದು ಹೇಳಿದ್ರು.

ಕೇರಳದ ಕೋಜಿಕೊಡೆಯ ಚಥಮಂಗಲಂನ 12 ವರ್ಷದ ಬಾಲಕ ಭಾನುವಾರ ನಿಫಾದಿಂದ ಸಾವಿಗೀಡಾಗಿದ್ದನು. ಈತನ ಪ್ರಾಥಮಿಕ ಸಂಪರ್ಕಿತರೆಂದು 251 ಮಂದಿಯನ್ನು ಗುರುತಿಸಲಾಗಿತ್ತು. ಇದರಲ್ಲಿ 54 ಮಂದಿ ಹೈ ರಿಸ್ಕ್​​​ ಗ್ರೂಪ್​ ಎಂದು ವಿಭಾಗಿಸಲಾಗಿತ್ತು. 251 ಮಂದಿಯಲ್ಲಿ 129 ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಯಾಗಿದ್ದರು. ಈಗ ನೆಗೆಟಿವ್​ ವರದಿ ಹೊಂದಿದರವಲ್ಲಿ ಮೃತ ಬಾಲಕನ ತಾಯಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದ್ದಾರೆ.

ರೋಗ ಲಕ್ಷಣ ಹೊಂದಿದ್ದ ಮೃತ ಬಾಲಕನ ಪೋಷಕರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯ ವರದಿ ನೆಗೆಟಿವ್​ ಬಂದಿದೆ. ಇದರಿಂದ ನಮಗೆ ದೊಡ್ಡ ರಿಲೀಫ್​ ಸಿಕ್ಕಂತಾಗಿದೆ ಎಂದು ವೀಣಾ ಜಾರ್ಜ್​ ಹೇಳಿದ್ದಾರೆ.

ಕೇರಳದಲ್ಲಿ ಎರಡು ವರ್ಷಗಳ ಹಿಂದೆ ಅಂದರೆ 2018ರ ಮೇ 1ರಂದು ದೇಶದ ಮೊದಲ ನಿಫಾ ಸೋಂಕು ಪತ್ತೆಯಾಗಿತ್ತು. ದೇಶ ಮಟ್ಟದಲ್ಲಿ ಭಾರೀ ಭೀತಿಯನ್ನು ಸೃಷ್ಟಿಸಿದ್ದ ಈ ಕಾಯಿಲೆಯಿಂದ ಬಚಾವಾಗುವಲ್ಲಿ ಕೇರಳ ಯಶಸ್ವಿಯಾಗಿತ್ತು. ಇದು ಬಾವಲಿ ಹಾಗೂ ಹಂದಿಗಳ ಮೂಲಕ ಹರಡುವ ವೈರಸ್​ ಆಗಿದೆ. ಈ ಸೋಂಕು ತಾಕಿಸಿಕೊಂಡ ವ್ಯಕ್ತಿಯು ಮೆದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...