alex Certify ಶಾಲೆಯಲ್ಲಿ ಭೇಲ್ಪುರಿ ಮಾಡಿದ 2 ನೇ ತರಗತಿ ಮಕ್ಕಳು….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯಲ್ಲಿ ಭೇಲ್ಪುರಿ ಮಾಡಿದ 2 ನೇ ತರಗತಿ ಮಕ್ಕಳು….! ವಿಡಿಯೋ ವೈರಲ್

ಶಾಲೆಯಲ್ಲಿನ ಕ್ರಿಯಾಶೀಲ ಚಟುವಟಿಕೆಗಳ ಮಜವೇ ಮಜಾ. ಒಂದೊಂದು ಶಾಲೆಯಲ್ಲಿ ಒಂದೊಂದು ರೀತಿ ವಿಶೇಷ ಚಟುವಟಿಕೆ ನಡೆಯುತ್ತದೆ.

ಇಲ್ಲೊಂದು ಶಾಲೆಯಲ್ಲಿ 2 ನೇ ತರಗತಿಯ ವಿದ್ಯಾರ್ಥಿಗಳ ಗುಂಪು ಒಟ್ಟಾಗಿ ಭೇಲ್ಪುರಿ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್‌ನಲ್ಲಿ ಆರ್‌ಜೆಎಫ್ ನಗ್ರಿಕ್ಸಟ್ಟಾ ಎಂಬ ಪೇಜ್ ಹಂಚಿಕೊಂಡಿದ್ದು, 10.2 ಮಿಲಿಯನ್ ವೀಕ್ಷಣೆ ಗಳಿಸಿದೆ.

ವಿದ್ಯಾರ್ಥಿಗಳು ಸಾಲಾಗಿ ಬಂದು ಭೇಲ್ಪುರಿಯ ಪದಾರ್ಥಗಳನ್ನು ದೊಡ್ಡ ಪಾತ್ರೆಯಲ್ಲಿ ಹಾಕುತ್ತಿರುವುದನ್ನು ಕಾಣಬಹುದು. ಒಬ್ಬೊಬ್ಬರಾಗಿ ಬಂದು ಟೊಮೆಟೊ, ಈರುಳ್ಳಿ, ಹುರಿದ ಚನಾ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿದರು. ಒಬ್ಬಾತ ನಿಂಬೆಹಣ್ಣನ್ನು ಹಿಂಡಿದರೆ ಕೊನೆಯಲ್ಲಿ, ಚಿಕ್ಕ ಹುಡುಗ ಬೇಲ್ಪುರಿಗೆ ಸ್ವಲ್ಪ ಉಪ್ಪು ಹಾಕಿದ್ದಾನೆ.

ಪೋಸ್ಟ್‌ ‌ನ ಶೀರ್ಷಿಕೆ ಪ್ರಕಾರ, ವಿದ್ಯಾರ್ಥಿಗಳು ಮುಂಬೈನ ಲಾಲ್ಜಿ ತ್ರಿಕಾಮ್ಜಿ ಎಂಪಿಎಸ್ ಆಂಗ್ಲ ಮಾಧ್ಯಮ ಶಾಲೆಯವರು. ನೆಟ್ಟಿಗರು ಈ ವೀಡಿಯೊವನ್ನು ಸಂರ್ಪೂಣವಾಗಿ ಆನಂದಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...