alex Certify ಹಲ್ಲೆ ನಡೆಸಿದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದ ಭಾರತೀಯ ಸೇನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಲ್ಲೆ ನಡೆಸಿದ ಆರೋಪವನ್ನು ಸ್ಪಷ್ಟವಾಗಿ ಅಲ್ಲಗಳೆದ ಭಾರತೀಯ ಸೇನೆ

ಪುಲ್ವಾಮಾದ ತ್ರಾಲ್‌ ಬಳಿಯ ಹಳ್ಳಿಯೊಂದರಲ್ಲಿ ಕುಟುಂಬವೊಂದರ ಸದಸ್ಯರ ಮೇಲೆ ತನ್ನ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂಬ ವರದಿಗಳು ಆಧಾರ ರಹಿತವಾಗಿದೆ ಎಂದಿರುವ ಭಾರತೀಯ ಸೇನೆ, ಈ ಆಪಾದನೆಗಳನ್ನು ಅಲ್ಲಗಳೆದಿದೆ.

“ಯಾವುದೇ ಮನೆ ಶೋಧಿಸಿದ್ದಾಗಲೀ, ಅಥವಾ ಯಾರ ಮೇಲಾದರೂ ಹಲ್ಲೆ ಮಾಡಿದ್ದಾಗಲೀ ಸೇನೆಯಿಂದ ಸೀರ್‌ ಗ್ರಾಮದಲ್ಲಿ ಸೆಪ್ಟೆಂಬರ್‌ 27-28ರ ರಾತ್ರಿ ನಡೆದಿಲ್ಲ,” ಎಂದು ಭಾರತಿಯ ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

“ನಾಲೆಯೊಂದರ ಪಕ್ಕ ಕುಳಿತಿದ್ದ ಇಬ್ಬರನ್ನು ಪ್ರಶ್ನಿಸಿದ ವೇಳೆ, ಅಲಿ ಮೊಹಮ್ಮದ್ ಚೋಪಾನ್ ಹಾಗೂ ಆತನ ಕುಟುಂಬದ ಸದಸ್ಯರು ತಮ್ಮ ಮನೆಯಿಂದ ಹೊರಗೆ ಬಂದರು. ಅಲಿ ಮೊಹಮ್ಮದ್ ಚೋಪಾನ್‌ನ ಮಗಳು ಇಶ್ರತ್‌ ಜಾನ್‌‌ ಪ್ರಜ್ಞೆ ತಪ್ಪಿದವಳಂತೆ ಕಂಡ ಕೂಡಲೇ ಕುಟುಂಬದ ಸದಸ್ಯರು ಗಾಬರಿಯಿಂದ ಕೂಗಿಕೊಂಡರು. ಈ ವೇಳೆ ಊರಿನ ಇತರ ಗ್ರಾಮಸ್ಥರನ್ನು ಕರೆದ ಕುಟುಂಬ ತಮ್ಮ ಮನೆಯ ಮೇಲೆ ಸೇನೆ ದಾಳಿ ಮಾಡಿದ್ದು ಹುಡುಗಿಯ ಮೇಲೆ ಹಲ್ಲೆ ಮಾಡಿದೆ ಎಂದು ದೂರಲಾರಂಭಿಸಿದರು. ಅ ವೇಳೆ ಸೇನೆಯ ಸಿಬ್ಬಂದಿ ಮನೆಯ ಹತ್ತಿರವಾಗಲೀ ಅಥವಾ ಆ ಹುಡುಗಿಯ ಹತ್ತಿರವಾಗಲೀ ಇರಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ,” ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಚ್ಚರಿ..! ಕೊರೊನಾ ಕಾರಣಕ್ಕೆ ಉಳೀತು ಈಕೆ ಜೀವ

ತ್ರಾಲ್‌ ಬಳಿ ಊರೊಂದರಲ್ಲಿ ಕುಟುಂಬವೊಂದರ ಮನೆಯ ಮೇಲೆ ದಾಳಿ ನಡೆಸಿದ ಭಾರತೀಯ ಸೇನಾ ಸಿಬ್ಬಂದಿ ಕುಟುಂಬದ ಸದಸ್ಯರನ್ನು ಬೆದರಿಸಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆಪಾದಿಸಿದ್ದರು. “ಗಂಭೀರ ಗಾಯಗಳಾದ ಕಾರಣ ಆ ಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ಸೇನೆಯಿಂದ ನಾಗರಿಕರ ಮೇಲೆ ದಾಳಿಯಾಗುತ್ತಿರುವುದು ಇದೇ ಮೊದಲಲ್ಲ,” ಎಂದು ಮುಫ್ತಿ ಟ್ವೀಟ್ ಮಾಡಿದ್ದರು.

ಭಯೋತ್ಪಾದಕರಿಗೆ ನೆರವು ನೀಡುತ್ತಿರುವ ಆಪಾದನೆ ಮೇಲೆ ಸದ್ಯ ಜೈಲಿನಲ್ಲಿರುವ ಶಬ್ಬೀರ್‌ ಅಹ್ಮದ್ ಚೋಪನ್‌ ತಂದೆ ಅಹ್ಮದ್ ಚೋಪನ್ ಆಗಿದ್ದು, ಈ ಕುಟುಂಬವು, ಆಗಸ್ಟ್ 21ರಂದು ಎನ್‌ಕೌಂಟರ್‌ನಲ್ಲಿ ಸತ್ತ ಜೈಶೆ ಮೊಹಮ್ಮದ್ ಭಯೋತ್ಪಾದಕ ಅಬ್ದುಲ್ ಹಮೀದ್ ಚೋಪನ್‌ಗೆ ಸಂಬಂಧಿಸಿದೆ ಎಂದು ಸೇನೆ ತಿಳಿಸಿದೆ. ಜಮ್ಮು ಕಾಶ್ಮೀರದಲ್ಲಿ ಸಶಸ್ತ್ರ ಪಡೆಗಳ ಮೇಲೆ ವದಂತಿಗಳನ್ನು ಹಬ್ಬಿಸುತ್ತಿರುವ ಮಂದಿಯ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸೇನೆ ನಿರತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...