alex Certify BIG NEWS: ವಿಮಾನ ದುರಂತದಲ್ಲಿ ‘ಟಾರ್ಜನ್’​ ಖ್ಯಾತಿ ನಟ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವಿಮಾನ ದುರಂತದಲ್ಲಿ ‘ಟಾರ್ಜನ್’​ ಖ್ಯಾತಿ ನಟ ಸಾವು

ಅಮೆರಿಕದ ನ್ಯಾಶ್​ವಿಲ್ಲೆ ಎಂಬಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ಟಾರ್ಜನ್​ ಖ್ಯಾತಿಯ ನಟ ಜೋ ಲಾರಾ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು ಏಳು ಮಂದಿ ಸಾವಿಗೀಡಾಗಿದ್ದಾರೆ.

ಶನಿವಾರ ಸ್ಥಳೀಯ ಕಾಲಮಾನ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಟೆನ್ನೆಸ್ಸಿ ವಿಮಾನ ನಿಲ್ದಾಣದಿಂದ ಫ್ಲೋರಿಡಾದ ಪ್ಲಾಮ್​ ಬೀಚ್​ಗೆ ಈ ಸಣ್ಣ ವಾಣಿಜ್ಯ ವಿಮಾನವು ಹೊರಟಿತ್ತು.

ಈ ವಿಮಾನವು ನ್ಯಾಶ್ವಿಲ್ಲೆಯಿಂದ ದಕ್ಷಿಣದಲ್ಲಿ 19 ಕಿಲೋಮೀಟರ್​ ದೂರದಲ್ಲಿರುವ ಪರ್ಸಿ ಪ್ರೀಸ್ಟ್​ ಸರೋವರದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ಫೆಡರಲ್​ ಏವಿಯೇಷನ್​ ಅಡ್ಮಿನಿಸ್ಟ್ರೇಷನ್​ ಮಾಹಿತಿ ನೀಡಿದೆ.

ಜೋ ಲಾರಾ 1989ರಲ್ಲಿ ತೆರೆ ಕಂಡ ಟೆಲಿವಿಷನ್​ ಮೂವಿ ಟಾರ್ಜನ್​ ಇನ್ ಮ್ಯಾನ್​ಹ್ಯಾಟನ್​​ನಲ್ಲಿ ಟಾರ್ಜನ್​ ಪಾತ್ರವನ್ನ ನಿರ್ವಹಿಸಿದ್ದರು. ಇದಾದ ಬಳಿಕ ಟಾರ್ಜನ್​ : ದಿ ಎಪಿಕ್​​ ಅಡ್ವೆಂಚರಸ್​ ಎಂಬ ಟೆಲಿವಿಷನ್​ ಸಿರೀಸ್​ನಲ್ಲಿ 1996-1997ರಲ್ಲಿ ಕಾಣಿಸಿಕೊಂಡಿದ್ದರು. ಟಾರ್ಜನ್​ ಪಾತ್ರ ಲಾರಾಗೆ ಅಪಾರ ಪ್ರಮಾಣದಲ್ಲಿ ಜನಪ್ರಿಯತೆಯನ್ನ ನೀಡಿತ್ತು.

ಲಾರಾ ಹಾಗೂ ಗ್ವೆನ್​ ಶ್ಯಾಂಬ್ಲಿನ್​ ಲಾರಾ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗ್ವೆನ್​ ಕ್ರಿಶ್ಚಿಯನ್​ ತೂಕ ಇಳಿಕೆ ಗ್ರೂಪ್​​ ವೇಯ್​ ಡೌನ್​ ಮಿನಿಸ್ಟ್ರೀಸ್​ನ ಮುಖಂಡೆ ಆಗಿದ್ದಾರೆ. ಮೃತ ಗ್ವೆನ್​​ ತಮ್ಮ ಮೊದಲ ವಿವಾಹದಲ್ಲಿ ಇಬ್ಬರು ಮಕ್ಕಳನ್ನ ಹೊಂದಿದ್ದರು ಎಂದು ಸ್ಥಳೀಯ ವೆಬ್​ಸೈಟ್​ ಒಂದು ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...