ಜಗತ್ತಿನ ಅತ್ಯಂತ ಶ್ರೇಷ್ಠ ಆರೋಗ್ಯ ತಜ್ಞ ಎಂದರೆ ಅದು ಪ್ರಕೃತಿಯೇ. ವಿವಿಧ ಮಾಸಗಳ ಹವಾಗುಣಕ್ಕೆ ತಕ್ಕಂತೆ ನಮ್ಮ ದೇಹಗಳ ಪೋಷಣೆಗೆ ಅಗತ್ಯವಿರುವ ಹಣ್ಣು ತರಕಾರಿಗಳನ್ನು ಪ್ರಕೃತಿ ನಮಗೆ ಕೊಡುತ್ತದೆ.
ಚಳಿಗಾಲ ಬಂದಾಗ ನಮ್ಮ ದೇಹದ ರೋಗ ನಿರೋಧಕ ಶಕ್ತಿ ವರ್ಧಿಸಲು ಅಗತ್ಯವಾದ ವಿಟಮಿನ್ ಸಿ ಇರುವ ಬೆಟ್ಟನಲ್ಲಿಕಾಯಿ, ಮೂಸಂಬಿಯಂಥ ಹಣ್ಣುಗಳು ಸಿಗುತ್ತವೆ. ಜ್ವರ, ಶೀತ ಹಾಗೂ ಉಸಿರಾಟದ ಸಮಸ್ಯೆಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ಈ ವಿಟಮಿನ್ ಅವಶ್ಯವಾಗಿದೆ. ಇದೇ ಚಳಿಗಾಲದಲ್ಲಿ ದೇಹಕ್ಕೆ ಅವಶ್ಯವಾಗಿ ಬೇಕಾದ ವಿಟಮಿನ್-ಎ ಪೂರೈಕೆ ಮಾಡಲು ನಮ್ಮಲ್ಲಿ ಪಪ್ಪಾಯ, ಕ್ಯಾರೆಟ್‌ಗಳಂಥ ತರಕಾರಿಗಳು ಸಿಗುತ್ತವೆ.
ವಿಟಮಿನ್ ಭರಿತರಾಗಿ
ಚಳಿಗಾಲದಲ್ಲಿ ನಿಮ್ಮ ದೇಹಕ್ಕೆ ಹೆಚ್ಚುವರಿ ಪೋಷಕಾಂಶಗಳು ಬೇಕಾಗುತ್ತವೆ. ಹೀಗಾಗಿ ನೀವು ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ತರಕಾರಿಗಳ ಸೇವನೆ ಮಾಡಬೇಕಾಗುತ್ತದೆ.
* ವಿಟಮಿನ್ ಎ ಮತ್ತು ವಿಟಮಿನ್ ಸಿ ಚರ್ಮವನ್ನು ಆರೋಗ್ಯಪೂರ್ಣವಾಗಿಟ್ಟು, ನಿಮ್ಮ ತಾರುಣ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ.
* ಒಣಹಣ್ಣುಗಳನ್ನು ಸಹ ಚಳಿಗಾಲದಲ್ಲಿ ಚೆನ್ನಾಗಿ ತಿನ್ನಬೇಕು.
* ನಿಮ್ಮ ಪಥ್ಯದಲ್ಲಿ ಬಟಾಣಿ ಸೇರಿಸುವುದರಿಂದ ದೇಹದ ಉಷ್ಣಾಂಶ ಕಾಪಾಡಿಕೊಳ್ಳಲು ಅವಶ್ಯವಾದ ಪ್ರೋಟೀನ್ ಸಿಗುತ್ತದೆ. ಉಪ್ಪು ರಹಿತವಾಗಿ ಬಟಾಣಿ ಸೇವನೆಯಿಂದ ದೇಹಕ್ಕೆ ಒಮೆಗಾ 3 ಪೋಷಕಾಂಶಗಳು ಸಿಗುತ್ತವೆ.
* ಎಳ್ಳೆಣ್ಣೆಯಲ್ಲಿ ಹುರಿದ/ಕರಿದ ತಿಂಡಿಗಳು ಹಾಗೂ ಕಡ್ಲೆಬೀಜಗಳು ಈ ಕಾಲದಲ್ಲಿ ಭಾರೀ ಇಷ್ಟವಾಗುತ್ತವೆ.
* ಹಣ್ಣು-ತರಕಾರಿಗಳ ರಸದ ಸೇವನೆಯಿಂದ ನಿಮ್ಮ ದೇಹ ಇನ್ನಷ್ಟು ಉಲ್ಲಾಸಿತಗೊಳ್ಳುತ್ತದೆ. ಕಿತ್ತಳೆ, ಮೂಸಂಬಿ, ದಾಳಿಂಬೆಯಂಥ ಹಣ್ಣುಗಳು ಅಥವಾ ಕ್ಯಾರೆಟ್, ಪಾಲಕ್ ಅಥವಾ ಎಲೆಕೋಸಿನ ರಸದ ಸೇವನೆಯೂ ಸೂಕ್ತ. ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸಿ, ವಿಷಯುಕ್ತ ಅಂಶ ಸೇರಿಕೊಳ್ಳದಂತೆ ಇವು ನೋಡಿಕೊಳ್ಳುತ್ತವೆ. ಸ್ಪಷ್ಟ ಚರ್ಮ ಹಾಗೂ ಹೊಳೆಯುವ ಕೂದಲಿನ ಮೂಲಕ ಇವೆಲ್ಲಾ ಪ್ರತಿಫಲನಗೊಳ್ಳುತ್ತವೆ.
2002ರ ಗುಜರಾತ್ ಹಿಂಸಾಚಾರ ಯಾವ ಸರ್ಕಾರದ ಅವಧಿಯಲ್ಲಿ ನಡೆಯಿತು…? ಸಿಬಿಎಸ್ಇ 12ನೇ ತರಗತಿ ಪರೀಕ್ಷೆಯಲ್ಲಿ ಕೇಳಲಾಗಿದೆ ಈ ಪ್ರಶ್ನೆ
ಬಿಸಿಯಾದ ಪೇಯಗಳ ಸೇವನೆಯಿಂದ ನಿಮ್ಮ ದೇಹವನ್ನು ಬೆಚ್ಚಗಿಡಿ
ಬಿಸಿಯಾದ ಪೇಯಗಳ ಸೇವನೆಗೆ ಚಳಿಗಾಲ ಸೂಕ್ತವಾದ ಕಾಲ. ಸಾಮಾನ್ಯವಾದ ಚಹಾ ಅಥವಾ ಕಾಫಿಗಿಂತಲೂ, ಗಿಡಮೂಲಿಕೆ ಭರಿತ ಚಹಾಗಳನ್ನೊಮ್ಮೆ ಪ್ರಯತ್ನಿಸಿ ನೋಡಿ. ಆಯುರ್ವೇದದಲ್ಲಿ ನಮ್ಮ ದೇಹವನ್ನು ಬೆಚ್ಚಗಿಡಲು ಬೇಕಾದ ಆಹಾರಗಳ ಉಲ್ಲೇಖವಿದೆ. ’ಸಾರ್ವತ್ರಿಕ ಪರಿಹಾರ’ವೆಂದೇ ಕರೆಯಲಾಗುವ ಶುಂಠಿಯಲ್ಲಿ ಬಹಳ ಅನುಕೂಲಗಳು ಇವೆ. ಊಟದ ನಂತರ ಜೀರ್ಣ ಸರಿಯಾಗಿ ಆಗಲೆಂದು ಶುಂಠಿ ಚಹಾ ಸೇವನೆಯನ್ನೂ ಮಾಡಲಾಗುತ್ತದೆ. ಚಳಿಗಾಲದಲ್ಲಿ ಕೆಮ್ಮು ಮತ್ತು ನೆಗಡಿಗೂ ಶುಂಠಿ ಚಹಾ ಉತ್ತಮವಾದ ಪರಿಹಾರ. ಶುಂಠಿಯನ್ನು ಸೂಪ್, ಚಟ್ನಿಗಳಿಗೂ ಸಹ ಹಾಕಬಹುದು. ಕರಿಮೆಣಸು ಹಾಗೂ ತುಳಸಿ ಸಹ ಕೆಮ್ಮಿಗೆ ಉತ್ತಮ ಪರಿಹಾರ.
ನಿಮ್ಮ ಚಹಾವನ್ನು ಇನ್ನಷ್ಟು ಮಸಾಲೆ ಭರಿತಗೊಳಿಸಲು ಅದಕ್ಕೆ ಏಲಕ್ಕಿ, ದಾಲ್ಚಿನ್ನಿ, ಮೆಣಸು ಹಾಗೂ ಜಾಯಿಫಲ ಸೇರಿಸಬಹುದು. ಹೀಗೆ ಮಾಡುವುದರಿಂದ ಚಹಾ ಇನ್ನಷ್ಟು ರುಚಿಯಾಗುವುದಲ್ಲದೇ, ಸಣ್ಣ ಪುಟ್ಟ ಕಾಯಿಲೆಗಳ ವಾಸಿ ಮಾಡಲು ನೆರವಾಗುತ್ತವೆ.
ಇದೇ ವೇಳೆ ಬಿಸಿಯಾದ ಸೂಪ್‌ಗಳ ಸೇವನೆಯಿಂದ ಚಳಿಗೆ ಆಹ್ಲಾದಕರವೆನಿಸುತ್ತದೆ. ತರಕಾರಿಗಳನ್ನ ನೀರಿನಲ್ಲಿ ಕುದಿಸಿ ಸೂಪ್‌ಗಳನ್ನು ಸುಲಭದಲ್ಲಿ ಮಾಡಬಹುದು. ಆಲೂಗೆಡ್ಡೆ, ಕ್ಯಾರೆಟ್, ಟರ್ನಿಪ್, ಬಟಾಣಿ, ಟೊಮ್ಯಾಟೋದಂಥ ತರಕಾರಿಗಳಿಂದ ಆರಾಮವಾಗಿ ಸೂಪ್ ಮಾಡಬಹುದು. ಪಾಲಕ್ ಸೂಪ್ ಸಹ ಮಾಡಬಹುದಾಗಿದೆ. ಚಳಿಯಲ್ಲಿ ಸಿಗುವ ಅಣಬೆಗಳಿಂದಲೂ ಸೂಪ್ ಚೆನ್ನಾಗಿ ಆಗುತ್ತದೆ.